ಪ್ರಮುಖ ಸುದ್ದಿ

ಲೈಟ್ ಕಂಬ ಬಿದ್ದು ಬಾಲಕಿ ಗಂಭೀರ

ರಾಜ್ಯ(ಬೆಂಗಳೂರು)ಆ.21:- ಪುಟ್‌ಪಾತ್ ಮೇಲಿದ್ದ ಸ್ಟ್ರೀಟ್ ಲೈಟ್ ಕಂಬ ಬಿದ್ದು ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಡುಗುಡಿ ಓ ಫಾರಂ ಮಧ್ಯಭಾಗದ ದಿನ್ನೂರು ಕ್ರಾಸ್ ಬಳಿ ನಡೆದಿದೆ

ವರ್ತೂರಿನ 7ನೇ ತರಗತಿ ವಿದ್ಯಾರ್ಥಿನಿ ಯುವರಾಣಿ(12)ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ತಂದೆ ಹರೀಶ್ ಜೊತೆ ಬೈಕ್‌ನಲ್ಲಿ ಹೊಸಕೋಟೆಯಲ್ಲಿನ ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದ ಯುವರಾಣಿ ಅಲ್ಲಿಂದ ವಾಪಸ್ ಬರುತ್ತಿದ್ದಾಗ ಮಾರ್ಗ ಮಧ್ಯೆ ದಿನ್ನೂರು ಕ್ರಾಸ್ ಬಳಿ ತುಕ್ಕು ಹಿಡಿದಿದ್ದ ಸ್ಟ್ರೀಟ್ ಲೈಟ್ ಕಂಬವು ಯುವರಾಣಿ ಮುಖದ ಮೇಲೆ ಬಲವಾಗಿ ಬಿದ್ದಿದೆ.ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯರ ನೆರವಿನೊಂದಿಗೆ ಹತ್ತಿರದ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.ತಂದೆ ಹರೀಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ತುಕ್ಕು ಹಿಡಿದಿದ್ದ ಕಂಬವನ್ನು ಬದಲಿಸಿ ಹೊಸ ಕಂಬ ಅಳವಡಿಸದೇ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ.

ಬಾಲಕಿಯ ಮೆಲೆ ಕಂಬ ಬೀಳಲು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಕಾಡುಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿರುವ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: