ಮೈಸೂರು

ಶ್ವಾನಗಳ ಮೇಲೂ ಕಳ್ಳರ ಕಣ್ಣು : ಮೂರು ಶ್ವಾನಗಳ ಕಳುವು

ಮೈಸೂರು,ಆ.21:- ಮನೆಯಲ್ಲಿ ಸಾಕುವ ಶ್ವಾನಗಳ ಮೇಲೂ ಕಳ್ಳರು ಕಣ್ಣಿಟ್ಟಿದ್ದಾರೆ. ಕಳ್ಳರ ದೃಷ್ಟಿಯೀಗ ಬೆಲೆಬಾಳುವ ಸಾಕುಶ್ವಾನಗಳ ಮೇಲೆ ಬಿದ್ದಿದ್ದು, ವ್ಯಕ್ತಿಯೋರ್ವರಿಗೆ ಸೇರಿದ ಮೂರು  ಶ್ವಾನಗಳನ್ನು ಕಳ್ಳರು ಕದ್ದೊಯ್ದ ಘಟನೆ ಲಿಂಗಾಂಬುದಿ ಪಾಳ್ಯದಲ್ಲಿ ನಡೆದಿದೆ.

ಲಿಂಗಾಂಬುದಿ ಪಾಳ್ಯದ ಶರವಣ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಮೂರು ಶ್ವಾನಗಳನ್ನು ಕದ್ದು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಾಸ್ಕ್ ಧರಿಸಿ ಮನೆಯೊಳಗೆ ನುಗ್ಗಿರುವ ಖದೀಮರು ಲಕ್ಷರೂ.ಬೆಲೆಬಾಳುವ ಮೌಲ್ಯದ ಶ್ವಾನಗಳನ್ನು ಕದ್ದೊಯ್ದಿದ್ದಾರೆ. ಕಳುವಾದ ಶ್ವಾನಗಳ ಪೈಕಿ ಒಂದು  ಶ್ವಾನವು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನ ಪಡೆದಿತ್ತು ಎನ್ನಲಾಗಿದೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಮಾಲೀಕ ಶರವಣ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: