ಕರ್ನಾಟಕ

ಹಾಸನದಲ್ಲಿ ಭೂಮಿ ಕಂಪಿಸಿದ ಅನುಭವ

ಹಾಸನ,ಆ.21-ಹಾಸನ ಜಿಲ್ಲೆಯ ಹಿಜ್ಜನಹಳ್ಳಿ ಗ್ರಾಮದ ಬಳಿ ಸೋಮವಾರ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ.

ಹಿಜ್ಜನಹಳ್ಳಿ ಗ್ರಾಮದಲ್ಲಿ ಸುಮಾರು 4 ಕಿ.ಮಿ ನಷ್ಟು ಕಾಂಕ್ರೀಟ್ ರಸ್ತೆ ಹುದುಗಿ ಹೋಗಿದ್ದು, ಭಾರೀ ಗಾತ್ರದ ಬಂಡೆಯೊಂದು ಛಿದ್ರಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. 100ಕ್ಕೂ ಹೆಚ್ಚು ಮನೆಗಳು ಬಿರುಕುಬಿಟ್ಟಿವೆ. ಕೆಲ ಮನೆಗಳು ನೆಲಸಮವಾಗಿವೆ. ಎಡಕುಮರಿ ರೈಲ್ವೆಹಳಿ ಮಾರ್ಗದಲ್ಲಿ ಅನೇಕ ಕಡೆ ಗುಡ್ಡ ಕುಸಿತವಾಗಿದೆ. ಸಕಲೇಶಪುರದ ವಿವಿಧೆಡೆ ಭೂಕುಸಿತ ಮುಂದುವರೆದಿದೆ.

ರಾತ್ರೋರಾತ್ರಿ ಇಡೀ ಗ್ರಾಮಕ್ಕೆ ಗ್ರಾಮವೇ ಖಾಲಿಯಾಗಿ ಸಂತ್ರಸ್ತರ ಕೇಂದ್ರಕ್ಕೆ ತೆರಳಿವೆ. ಆದರೂ ಇದುವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: