
ಮೈಸೂರು
ಸ್ವಚ್ಚ ಮತದಾನಕ್ಕೆ ನಾಳೆಯಿಂದ ಆಗಸ್ಟ್ ಕ್ರಾಂತಿ
ಮೈಸೂರು,ಆ.21 : ಸ್ವಚ್ಚ ಮತದಾನ ಜಾಗೃತಿಗಾಗಿ ಸಮಾಜವಾದಿ ಪಕ್ಷವು ನಾಳೆಯಿಂದ ಆಗಸ್ಟ್ ಕ್ರಾಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ 41ನೇ ವಾರ್ಡಿನ ಅಭ್ಯರ್ಥಿ ಪ್ರಕಾಶ್ ಬಾಬು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶತಮಾನೋತ್ಸವ ಹಿನ್ನಲೆಯಲ್ಲಿ ನಾಳೆ ಬೆಳಗ್ಗೆ ಕೆ.ಆರ್. ವೃತ್ತದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಆಗಸ್ಟ್ ಕ್ರಾಂತಿಗೆ ಚಾಲನೆ ನೀಡಲಿದ್ದು, ಮನೆ ಮನೆಗೆ ತೆರಳಿ ಕಡ್ಡಾಯ ಮತದಾನ ಹಾಗೂ ಹಣಕ್ಕಾಗಿ ಮತ ಮಾರಿಕೊಳ್ಳದಂತೆ ಮನವಿ ಮಾಡಲಾಗುವುದು ಎಂದು ತಿಳಿಸದರು.
ಹಣಕ್ಕಾಗಿ ಮತ ನೀಡುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ, ಆದ್ದರಿಂದ ಪಕ್ಷ, ಹಣ, ಹೆಂಡ, ಜಾತಿ,ಧರ್ಮ ನೋಡದೆ ಅಭ್ಯರ್ಥಿಗಳ ಗುಣ ನೋಡಿ ಮತ ನೀಡಿ ಎಂದು ಪ್ರಚಾರ ಮಾಡಲಾಗುವುದು, ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ 9 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅಭ್ಯರ್ಥಿಗಳು ಈ ಆಗಸ್ಟ್ ಕ್ರಾಂತಿಯಲ್ಲಿ ಪ್ರಚಾರ ನಡೆಸುವರು ಎಂದು ತಿಳಿಸಿದರು.
ಪಕ್ಷದ ಅಧ್ಯಕ್ಷ ಬಿ.ಕೆ.ಗೌಡ, ಪ್ರಧಾನ ಕಾರ್ಯದರ್ಶಿ ಪ್ರಸನ್ನ, 55ನೇ ವಾರ್ಡಿನ ಅಭ್ಯರ್ಥಿ ನಾಗೇಂದ್ರ ಮತ್ತಿತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)