ಮೈಸೂರು

ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಹಾಯ ಹಸ್ತ

ಮೈಸೂರು,ಆ.21:- ಕೊಡಗಿನ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಾಯಿ ಟ್ಯಾಟೂ ಮೈಸೂರು, ಹಾಗೂ ಕಿಡ್ ಝೀ ಚಿಣ್ಣರು ಸಹಾಯ ಹಸ್ತ ನೀಡಿದ್ದಾರೆ.

ಸಾಯಿ ಟ್ಯಾಟೂ ವತಿಯಿಂದ ಸುಮಾರು 35ಸಾವಿರಕ್ಕೂ ಹೆಚ್ಚಿನ ಬೆಲೆಬಾಳುವ ಮಕ್ಕಳ ಹಾಗೂ ಸ್ತ್ರೀಯರ ಉಡುಪುಗಳು ಹಾಗೂ ಆಹಾರ ಪದಾರ್ಥಗಳನ್ನು ಹಸ್ತಾಂತರಿಸಲಾಗಿದೆ.ಸಾಯಿ ಟ್ಯಾಟು ಸೆಂಟರ್ ನ ಪ್ರತ್ಯೇಕ್ ಪುರ್ಸು, ಹರಿ, ನಾಗೇಶ್ ಅರಸ್, ಚಂದನ, ಅನುರಾಧ, ಐಶ್ವರ್ಯ ಇನ್ನೂ ಮುಂತಾದವರು ಸೇರಿ ಕೊಡಗಿನ ಜನತೆಗೆ ಸಹಾಯ ಹಸ್ತ ನೀಡಿದ್ದಾರೆ.

ಅದೇ ರೀತಿ ಕಿಡ್ ಝಿಯ ಚಿಣ್ಣರೂ ಕೂಡ ಸಹಾಯ ಹಸ್ತ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: