ಸುದ್ದಿ ಸಂಕ್ಷಿಪ್ತ

ಆ.26 ರಿಂದ 30 ರವರೆಗೆ ಶ್ರೀರಾಘವೇಂದ್ರ ಸ್ವಾಮೀಜಿಯ ಆರಾಧನಾ ಮಹೋತ್ಸವ : ವಿಶೇಷ ಸಂಗೀತ ಕಾರ್ಯಕ್ರಮ

ಮೈಸೂರು,ಆ.21 : ವರುಣ ಹೋಬಳಿಯ ಜಂತಗಳ್ಳಿಯ ನಿರ್ಮಾಣ ನಗರದಲ್ಲಿರುವ ಕಲ್ಪವೃಕ್ಷ, ಶ್ರೀರಾಘವೇಂದ್ರ ಮಠ, ಶ್ರೀರಾಘವೇಂದ್ರಸ್ವಾಮಿಗಳವರ 347ನೇ ಆರಾಧನಾ ಪಂಚರಾತ್ರೋತ್ಸವವನ್ನು ದಿ.26 ರಿಂದ 30 ರವರೆಗೆ ಆರಾಧನಾ ಮಹೋತ್ಸವವನ್ನು ನಡೆಸಲಾಗುತ್ತಿದೆ.

ಆ.26ರ ಬೆಳಗ್ಗೆ 6.30ಕ್ಕೆ ಯಜುರ್ವೇದಿಯ ಉಪಾಕರ್ಮ, 9ಕ್ಕೆ ಸತ್ಯನಾರಾಯಣಸ್ವಾಮಿ ಪೂಜೆ, ಸಂಜೆ 6ಕ್ಕೆ ಗೋಪೂಜೆ, ಧ್ವಜಾರೋಹಣ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋದೊಂದಿಗೆ ಕೊನೆಗೊಳ್ಳುವುದು.

ಆ.27ರಂದು ಬೆಳಗ್ಗೆ 5.30ಕ್ಕೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ನಂತರ, ಕ್ಷೀರಾಭಿಷೇಕ ಸಹಿತ ಅಷ್ಟ್ರೋತ್ತರ ಪಾರಾಯಣ, ಮಹಾಪಂಚಾಮೃತ ಅಭಿಷೇಕ, ಕನಕಾಭಿಷೇಕ ವಿದ್ವಾಂಸರಿಂದ ಪ್ರವಚನವಿರುವುದು. ವಿದುಷಿ ರಮಾಮಣಿ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ.

ಆ/28ರಂದು ಪೂಜಾ ವಿಧಿ ವಿಧಾನಗಳೊಂದಿಗೆ ಸಂಜೆ 6 ರಿಂದ ವಿದುಷಿ ದೀಪಿಕಾ ಪಾಂಡುರಂಗಿ ಮತ್ತು ತಂಡದವರಿಂದ ದಾಸವಾಣಿ ಸಂಗೀತ ವಿರುವುದು.

ಆ.29ರಂದು ಬೆಳಗಿನ ಜಾವದ ಬ್ರಾಹ್ಮಿ ಮುಹೂರ್ತದಿಂದಲೇ ವಿವಿಧ ವಿಶೇಷ ಶೋಡಷೋಪಚಾರ ಪೂಜೆಗಳು ತದನಂತರ 10 ಕ್ಕೆ ನಿರ್ಮಾಣ ನಗರದ ಮುಖ್ಯ ರಸ್ತೆಯಲ್ಲಿ ಮಹಾರಥೋತ್ಸವ, ವಿದ್ವಾಂಸರಿಂದ ಪ್ರವಚನ ಹಾಗೂ ಸಂಜೆ ವಿದುಷಿ ರೂಪಶ್ರಿ ಆನಂದ್ ಮತ್ತು ತಂಡದವರಿಂದ ದಾಸರ ಪದಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: