ಸುದ್ದಿ ಸಂಕ್ಷಿಪ್ತ
ಬಿ.ಇಡಿ. ಕೋರ್ಸ್ ಅರ್ಜಿ ಆಹ್ವಾನ
ಮೈಸೂರು,ಆ.21-ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2018-19ನೇ ಸಾಲಿನಲ್ಲಿ 2 ವರ್ಷದ ಬಿ.ಇಡಿ. ಕೋರ್ಸಿನ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಬಿ.ಇಡಿ. ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಿದೆ.
ವೆಬ್ಸೈಟ್ www.schooleduction.kar.nic.in ರಲ್ಲಿ ಅರ್ಜಿ ಸಲ್ಲಿಸಲು ಆ.23 ಕೊನೆಯ ದಿನ. ಜಿಲ್ಲಾವಾರು ಬಿ.ಇಡಿ ಶಿಕ್ಷಣ ಸಂಸ್ಥೆಗಳ ಪಟ್ಟಿ, ಅರ್ಹತೆ, ಮೀಸಲಾತಿ, ವಿವರ ಹಾಗೂ ಇತರೆ ವಿವರಗಳನ್ನು ವೆಬ್ಸೈಟ್ ನಿಂದ ಪಡೆದುಕೊಳ್ಳಬಹುದು. ಆನ್ಲೈನ್ ಮೂಲಕ ಅರ್ಜಿಗಳನ್ನು ಕ್ರಮಬದ್ಧವಾಗಿ ಭರ್ತಿ ಮಾಡಲು ಅನುಕೂಲವಾಗುವಂತೆ ನೋಡಲ್ ಕೇಂದ್ರ ಸಂಖ್ಯೆ ಎನ್_27 ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ವಸಂತಮಹಲ್ ಆವರಣ ನಜûರ್ಬಾದ್ ಮೈಸೂರು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2420764 ನ್ನು ಸಂಪರ್ಕಿಸಬಹುದು. (ಎಂ.ಎನ್)