ಸುದ್ದಿ ಸಂಕ್ಷಿಪ್ತ

ಸಿನೀಯರ್ ಟೆಕ್ನೀಕಲ್ ಅಸಿಸ್ಟೆಂಟ್: ಅರ್ಜಿ ಆಹ್ವಾನ

ಮೈಸೂರು,ಆ.21-ಡಿಫೇನ್ಸ್ ರಿಸರ್ಚ ಎಂಡ್ ಡೆವಲಪ್‍ಮೆಂಟ್ ಆರ್ಗಾನೈಜೇಷನ್ ಡಿಆರ್ ಡಿಓ ಇವರಿಂದ ಸಿನೀಯರ್ ಟೆಕ್ನೀಕಲ್ ಅಸಿಸ್ಟೆಂಟ್- 494 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 28 ವರ್ಷಗಳು, ಹುದ್ದೆಯ ವಿವರ 3 ವರ್ಷದ ಡಿಪ್ಲೋಮ ಅಥವಾ ಬಿಎಸ್ಸಿ, ಕೃಷಿ/ ಆಟೋಮೊಬೈಲ್ ಎಂಜಿನಿಯರಿಂಗ್/ ಬಾಟನಿ/ ಕೆಮಿಕಲ್ ಇಂಜಿನಿಯರಿಂಗ್/ ಕೆಮಿಸ್ಟ್ರಿ/ ಸಿವಿಲ್ ಎಂಜಿನಿಯರಿಂಗ್/ ಕಂಪ್ಯೂಟರ್ ಸೈನ್ಸ್/ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/  ಎಲೆಕ್ಟ್ರಿಕಲ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಷನ್/ ಎಲೆಕ್ಟ್ರಾನಿಕ್ಸ್/  ಭೂವಿಜ್ಞಾನ/ ಇನ್ಸ್ಟ್ರುಮೆಂಟೇಷನ್/ ಲೈಬ್ರರಿ ಸೈನ್ಸ್/ ಗಣಿತ/ ಮೆಕ್ಯಾನಿಕಲ್ ಇಂಜಿನಿಯರಿಂಗ್/  ಮೆಟಲರ್ಜಿ/ ಛಾಯಾಗ್ರಹಣ/ ಭೌತಶಾಸ್ತ್ರ/ ಸೈಕಾಲಜಿ/ ಹಾಗೂ  ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆ.29 ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ ಡಿ.ಎಂ.ರಾಣಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೈಸೂರು ರವರನ್ನು ದೂರವಾಣಿ ಸಂಖ್ಯೆ 0821-2489972  ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು  https://www.drdo.gov.in/drdo/ceptam/ceptamnoticeboard.html ನಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ. (ಎಂ.ಎನ್)

Leave a Reply

comments

Related Articles

error: