ಸುದ್ದಿ ಸಂಕ್ಷಿಪ್ತ

ಭಾರಿ ವಾಹನ ಚಾಲನಾ ತರಬೇತಿ

ಮೈಸೂರು,ಆ.21-ಡಾ.ಬಿ.ಆರ್.ಅಂಬೇಡ್ಕರ್  ಅಭಿವೃದ್ಧಿ ನಿಗಮದಿಂದ ಪರಿಶಿಷ್ಟಜಾತಿಯ ನಿರುದ್ಯೋಗಿ ವಿದ್ಯಾವಂತ ಯುವಕ-ಯುವತಿಯರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.

ತರಬೇತಿಯನ್ನು ಕನಾಟಕ ರಾಜ್ಯ ರಸ್ತೆ, ಸಾರಿಗೆ ಸಂಸ್ಥೆಯ ತರಬೇತಿ ಶಾಲೆಗಳ ಮುಖಾಂತರ ನೀಡಲಾಗುವುದು.
ಅರ್ಜಿ ಸಲ್ಲಿಸುವವರ  ವಯೋಮಿತಿ 21 ರಿಂದ 40 ವರ್ಷದೊಳಗಿರಬೇಕು. ಎಸ್.ಎಸ್.ಎಲ್. ಉತ್ತೀರ್ಣರಾಗಿರಬೇಕು, ಟಿ.ಸಿ./ಅಂಕಪಟ್ಟಿ ದೃಢೀಕರಿಸಿದ ಪ್ರತಿ ಲಗತ್ತಿಸಬೇಕು. ಎಲ್.ಎಂ.ವಿ.ಪರವಾನಗಿ ಪಡೆದು ಕನಿಷ್ಟ 1 ವರ್ಷ ಪೂರ್ಣಗೊಂಡಿರಬೇಕು. ಒಂದು ವೇಳೆ ಟ್ರ್ಯಾಕ್ಟರ್ ಚಾಲನೆ ಪರವಾನಗಿ ಇದ್ದಲ್ಲಿ ಪರವಾನಗಿ ಪಡೆದು 2 ವರ್ಷಗಳಾಗಿರಬೇಕು.

ಅರ್ಜಿಯನ್ನು ಪಡೆಯುವಾಗ ಅರ್ಜಿದಾರರೇ ಸ್ವತ: ಬಂದು ತಮ್ಮ ವೈಯಕ್ತಿಕ ದಾಖಲೆಗಳಾದ ಎಲ್.ಎಂ.ವಿ.ಪರವಾನಗಿ/ ಟ್ರ್ಯಾಕ್ಟರ್ ಚಾಲನೆ ಪರವಾನಗಿ ಹಾಜರುಪಡಿಸುವುದು. ಅರ್ಜಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ನಂ. 9/ಎ, ಎಸ್.ಬಿ.ಎಂ ಜೋನಲ್ ಕಚೇರಿ ಕಟ್ಟಡದ 3ನೇ ಮಹಡಿ, ಸಾಹುಕಾರ್ ಚನ್ನಯ್ಯ ರಸ್ತೆ, ಚಾಮರಾಜಮೊಹಲ್ಲಾ, ಸರಸ್ವತಿಪುರಂ, ಮೈಸೂರು-9 ಇಲ್ಲಿ ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 10 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821-2332480 ಅನ್ನು ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: