ಮೈಸೂರು

ನಟ ದರ್ಶನ್, ಸೃಜನ್ ಲೋಕೇಶ್‍ರಿಂದ ಗ್ರಂಥಾಲಯ ಹಾಗೂ ಡಯಾಲಿಸಿಸ್ ಯಂತ್ರದ ಲೋಕಾರ್ಪಣೆ ಡಿ.25ರಂದು

ಕಲಿಸು ಫೌಂಡೇಷನ್ ಹಾಗೂ ಎಂ.ಕೆ.ಆಗ್ರೋಟೇಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸನ್‍ಪ್ಯೂರ್ ಅಡುಗೆ ಎಣ್ಣೆ ಸಂಸ್ಥೆಯು ಜಂಟಿಯಾಗಿ ಜನಪರ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಂಗವಾಗಿ ಸರ್ಕಾರಿ ಶಾಲೆಯ ಗ್ರಂಥಾಲಯ ಹಾಗೂ ಡಯಾಲಿಸಿಸ್ ಯಂತ್ರದ ಲೋಕಾರ್ಪಣೆಯನ್ನು ಆಯೋಜಿಸಿದೆ ಎಂದು ಕಲಿಸು ಫೌಂಡೇಷನ್ ಅಧ್ಯಕ್ಷ ನಿಖಿಲೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ಬುಧವಾರ ಪತ್ರಕರ್ತರ ಭವನದಲ್ಲಿ ಮಾತನಾಡುತ್ತಾ, ಡಿ.25ರ ಕ್ರಿಸ್‍ಮಸ್ ದಿನದಂದು ನಗರದ ಬಾಬುರಾಯನ ಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯವನ್ನು ಹಾಗೂ ಶ್ರೀರಂಗಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವನ್ನು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಹಾಗೂ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಉದ್ಘಾಟಿಸುವರು ಎಂದು ತಿಳಿಸಿದರು.

ಸುಮಾರು 125 ವರ್ಷಗಳ ಪುರಾತನ ಬಾಬುರಾಯನ ಕೊಪ್ಪಲಿನ ಸರ್ಕಾರಿ ಶಾಲೆಗೆ ಗ್ರಂಥಾಲಯದ ಕೊರತೆಯಿತ್ತು. ಇದನ್ನು ಸನ್‍ಪ್ಯೂರ್ ಸಂಸ್ಥೆಯ ಸಹಯೋಗದಲ್ಲಿ ಪೂರೈಸಲಾಗಿದೆ. ಈ ನಿಟ್ಟಿನಲ್ಲಿ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಮೈಸೂರಿನ 3 ಹಾಗೂ ಶ್ರೀರಂಗಪಟ್ಟಣದ 2 ಹಿಂದುಳಿದ ಸರ್ಕಾರಿ ಶಾಲೆಗಳನ್ನು ಕಲಿಸು ಫೌಂಡೇಷನ್ ದತ್ತು ಪಡೆದಿದ್ದು ಅದರ ಸಮಗ್ರಾಭಿವೃದ್ಧಿಗೆ ಶ್ರಮಿಸುತ್ತಿದ್ದು ಶಿಕ್ಷಕರನ್ನು ನೇಮಕ ಮಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಸಿಎಸ್‍ಆರ್‍ ಬ್ರಾಂಡ್‍ ಮ್ಯಾನೇಜರ್ ವಿಶ್ವಜ್ಞಾಚಾರ್ ಮಾತನಾಡಿ, ಸನ್‍ಪ್ಯೂರ್ ದೇಶದ ಮೊಟ್ಟ ಮೊದಲ ರಾಸಾಯನಿಕ ಮುಕ್ತ ಅಡುಗೆ ಎಣ್ಣೆಯಾಗಿದ್ದು 2005 ರಿಂದಲೂ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಣ್ಣೆ ಎನ್ನುವ ಖ್ಯಾತಿ ಗಳಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ವ್ಯಾಪಾರ ವಹಿವಾಟನ್ನು ಆರಂಭಿಸಿದೆ ಎಂದರು. ಅದರಂತೆ ಸಂಸ್ಥೆಯ ಆದಾಯದಿಂದ ಶೇಕಡಾವಾರು ಧನವನ್ನು ಸಮಾಜಸೇವೆಗಾಗಿ ಮೀಸಲಿಟ್ಟಿದ್ದು, ಸುಮಾರು 18 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗೆ ಎರಡು ಡಯಾಲಿಸಿಸ್ ಯಂತ್ರಗಳನ್ನು, ಎಸಿ ಹಾಗೂ ನೀರು ಶುದ್ಧೀಕರಿಸುವ ಯಂತ್ರವನ್ನು ದೇಣಿಗೆ ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಲು ದರ್ಶನ ತೂಗುದೀಪ್ ಸಂತೋಷದಿಂದ ಒಪ್ಪಿಕೊಂಡಿದ್ದು, ಈ ಸಂದರ್ಭ ಮಂಡ್ಯದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭಾಗವಹಿಸುವರು ಎಂದರು.

Leave a Reply

comments

Related Articles

error: