ಮೈಸೂರು

ಪೌರ ಕಾರ್ಮಿಕರ ಸಮಸ್ಯೆ ಆಲಿಸಿದ ಅಧ್ಯಕ್ಷರು

ಮೈಸೂರು ಮಹಾನಗರ ಪಾಲಿಕೆಯ 63ನೇ ವಾರ್ಡಿಗೆ ಬುಧವಾರ ಸಫಾಯಿ ಕರ್ಮಚಾರಿ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು.

ಜ್ಯೋತಿ ನಗರದ ಪೌರ ಕಾರ್ಮಿಕರ ಕಾಲೋನಿಗೆ ಭೇಟಿ ನೀಡಿದ ವೆಂಕಟೇಶ್ ಅವರು ಪೌರ ಕಾರ್ಮಿಕರೊಂದಿಗೆ ಮಾತನಾಡಿ ವಂಶಪಾರಂಪರ್ಯವಾಗಿ ನೀವು ಈ ಕೆಲಸ ಮಾಡಿಕೊಂಡು ಬರುತ್ತಿದ್ದೀರಿ. ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ವಿದ್ಯೆಯ ಅರಿವು ಅಗತ್ಯವಿದೆ. ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು ಬಂದಿದ್ದೇನೆ ಎಂದರು.

ನಿಮ್ಮ ಸಮಸ್ಯೆಯನ್ನು ಖುದ್ದು ವೀಕ್ಷಿಸುವುದರ ಜೊತೆ, ನಿಮ್ಮ ಸಮಸ್ಯೆಯನ್ನು ಆಲಿಸಲು ಬಂದಿದ್ದೇನೆ ಎಂದರು. ಈ ಸಂದರ್ಭ ಪೌರಕಾರ್ಮಿಕರು ತಮಗಾಗುತ್ತಿರುವ ತೊಂದರೆಗಳನ್ನು ಅಧ್ಯಕ್ಷರ ಬಳಿ ತೋಡಿಕೊಂಡರು.

ಮಾಜಿ ಕರ್ಮಚಾರಿ ಅಧ್ಯಕ್ಷರೂ, ಪಾಲಿಕೆಯ ಕೆಲವು ಸದಸ್ಯರು ಈ ಸಂದರ್ಭ ಅಧ್ಯಕ್ಷರ ಜೊತೆಗಿದ್ದರು.

Leave a Reply

comments

Related Articles

error: