
ಕರ್ನಾಟಕಪ್ರಮುಖ ಸುದ್ದಿ
ಕೊಡಗು ಸಂತ್ರಸ್ತರ ಉಪಯೋಗಕ್ಕೆ ವಸ್ತುಗಳನ್ನು ನೀಡಲು ಮಂಡ್ಯ ಡಿ.ಸಿ ಮನವಿ
ಮಂಡ್ಯ (ಆ.21): ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಉಂಟಾದ ಹಾನಿಯ ಸಂದರ್ಭದಲ್ಲಿ ಕೊಡಗಿನ ಜನರ ನೆರವಿಗೆ ಧಾವಿಸಿದ ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರ ಮತ್ತು ಕೊಡಗು ಜಿಲ್ಲಾಡಳಿತ ಧನ್ಯವಾದಗಳನ್ನು ಸಲ್ಲಿಸಿದೆ.
ಬಹಳಷ್ಟು ಜನರು ಆಹಾರ ಪದಾರ್ಥಗಳು, ಉಡುಗೆಗಳು, ನೀರು, ಹಾಲು ಮತ್ತು ಹೊದಿಕೆಗಳನ್ನು ನೀಡಿ ಸಹಕರಿಸುತ್ತಿದ್ದು, ಪ್ಲಾಸ್ಟಿಕ್ ಬಕೆಟ್ ಮತ್ತು ಮಗ್, ರೈನ್ ಕೋಟ್, ದಿನಬಳಕೆಯ ಉಡುಗೆಗಳು ಮತ್ತು ಬೆಚ್ಚಗಿನ ಉಡುಪುಗಳು, ಪಾದರಕ್ಷೆಗಳು, ಗಮ್ಬೂಟ್ಗಳು, ಗ್ಲೌಸ್ ಮತ್ತು ಮಾಸ್ಕ್ಗಳು, ಸ್ಯಾನಿಟರಿ ನ್ಯಾಪ್ಕಿನ್ಸ್ ಮತ್ತು ಡೈಪರ್ಸ್, ಪ್ಲಾಸ್ಟಿಕ್ ಮ್ಯಾಟ್ಗಳು, ಕೊಡೆಗಳು, ಟಾರ್ಚ್ ಲೈಟ್ಗಳು, ಮಾಪ್ಸ್, ಸ್ಯಾನಿಟೈಜರ್ಸ್ ಮತ್ತು ಡೆಟಾಲ್, ಬ್ಲೀಚಿಂಗ್ ಪೌಡರ್, ಫಿನಾಯಿಲ್ ಮತ್ತು ಸ್ವಚ್ಛತೆಗೆ ಸಂಬಂಧಪಟ್ಟ ವಸ್ತುಗಳು, ಸಾಬೂನು, ಶಾಂಪೂ, ಟೂತ್ ಬ್ರಶ್ ಮತ್ತು ಪೇಸ್ಟ್ ಮತ್ತು ಬಾಚಣಿಗೆಗಳು, ಅಡುಗೆ ಪರಿಕರಗಳು, ಕ್ಯಾಂಡಲ್ ಮತ್ತು ಬೆಂಕಿಪೊಟ್ಟಣಗಳು, ಟವೆಲ್ಗಳು, ಬೆಡ್ಶೀಟ್ಗಳು ಮತ್ತು ತಲೆದಿಂಬುಗಳು, ಲುಂಗಿ ಮತ್ತು ನೈಟಿಗಳು, ಆ್ಯಂಟಿಸೆಪ್ಟಿಕ್ ಲೋಷನ್ ಮತ್ತು ಆ್ಯಂಟಿ ಫಂಗಲ್ ಪೌಡರ್, ಅಡುಗೆ ಎಣ್ಣೆ, ಒಳ ಉಡುಪುಗಳು, ಲಗೇಜ್ ಬ್ಯಾಗ್ಗಳು, ಮೊಬೈಲ್ ಚಾರ್ಜರ್ಗಳು ಹಾಗೂ ಇತ್ಯಾದಿ ಸಾಮಾಗ್ರಿಗಳನ್ನು ನೀಡಿದ್ದಾರೆ.
ಈ ವಸ್ತುಗಳನ್ನೆಲ್ಲಾ ಮಳೆಹಾನಿ ಸಂತ್ರಸ್ತರಿಗೆ ಕೊಡಗು ಜಿಲ್ಲಾಡಳಿತವು ತೆರೆದಿರುವ ಸಂಗ್ರಹಣಾ ಕೇಂದ್ರಗಳಿಗೆ ಸ್ವಯಂ ಸೇವಕರು ಮತ್ತು ಸಂಘ ಸಂಸ್ಥೆಗಳು ಕಳುಹಿಸಿಕೊಡಲಾಗುತ್ತಿದೆ. ದಾನಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೆರವು ನೀಡಬಹುದು ಎಂದು ಕೊಡಗು ಜಿಲ್ಲಾಧಿಕಾರಿಯವರು ಕೋರಿದ್ದಾರೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ. (ಎನ್.ಬಿ)