ದೇಶಪ್ರಮುಖ ಸುದ್ದಿ

ಮುಂಬೈನ ಕ್ರಿಸ್ಟೆಲ್ ಟವರ್ ನಲ್ಲಿ ಭೀಕರ ಅಗ್ನಿ ಆಕಸ್ಮಿಕ

ದೇಶ(ಮುಂಬೈ)ಆ.22:- ಮುಂಬೈನ್ ಪರೇಲ್ ನಲ್ಲಿರುವ ಹಿಂದ್ ಮಾತಾ ಸಿನೆಮಾ ಬಳಿ 16ಮಹಡಿಯ ಕ್ರಿಸ್ಟೆಲ್ ಟವರ್ ನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ಅಗ್ನಿ ಅನಾಹತ ಸಂಭವಿಸಿದೆ.

ಅಗ್ನಿಶಾಮಕ ದಳದ ಹತ್ತು ವಾಹನಗಳು ಆಗಮಿಸಿದ್ದು, ಬೆಂಕಿ ಆರಿಸಲು ಯತ್ನಿಸುತ್ತಿವೆ. ಕಟ್ಟಡದೊಳಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಕಟ್ಟಡದ 9ಮತ್ತು 10ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಅಗ್ನಿ ಆಕಸ್ಮಿಕಕ್ಕೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 8.30ರ ಸುಮಾರಿಗೆ ದಟ್ಟೈಸಿದ ಹೊಗೆಯ ಜೊತೆ ಬೆಂಕಿಮ ಕಾಣಿಸಿಕೊಂಡಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. (ಎಸ್.ಎಚ್)

Leave a Reply

comments

Related Articles

error: