
ಕರ್ನಾಟಕಪ್ರಮುಖ ಸುದ್ದಿ
ಕೊಡಗು ಪ್ರವಾಹ : ಕೇಂದ್ರಕ್ಕೆ 100 ಕೋಟಿ ರೂ. ಬೇಡಿಕೆ ಇಟ್ಟ ಸಿಎಂ
ಬೆಂಗಳೂರು (ಆ.22): ಪ್ರವಾಹದಿಂದ ಕುಸಿದಿರುವ ರಾಜ್ಯದ ಕೊಡಗು ಜಿಲ್ಲೆಯಲ್ಲಿ ತಕ್ಷಣದ ಪರಿಹಾರ ಕಾರ್ಯಕ್ರಮಗಳಿಗಾಗಿ ಕೇಂದ್ರ ಸರ್ಕಾರ 100 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೊಡಗು ಜಿಲ್ಲೆಗೆ ಪ್ರಧಾನಿಮಂತ್ರಿ ಅವರು ಕನಿಷ್ಠ 100 ಕೋಟಿ ರೂ.ಗಳನ್ನಾದರೂ ನೀಡಬೇಕು. ಹಾಳಾಗಿರುವ ರಸ್ತೆಗಳ ದುರಸ್ತಿ ಕಾರ್ಯ ಆಗಬೇಕಿದೆ. ಸದ್ಯ ನಾವು ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನೆರವು ಪಡೆಯುತ್ತಿದ್ದೇವೆ. ಈಗಾಗಲೇ ವೈಮಾನಿಕ ಸಮೀಕ್ಷೆ ಮೂಲಕ ಕೊಡಗು ಸ್ಥಿತಿಗತಿ ಪರಿಸೀಲಿಸಲಾಗುತ್ತಿದೆ. ಪ್ರವಾಹದಿಂದಾಗಿ 12 ಮಂದಿ ಸಾವನ್ನಪ್ಪಿದ್ದು, 845 ಮನೆಗಳು ಸಂಪೂರ್ಣ ಹಾನಿಗಿಡಾಗಿವೆ. ಕೊಡಗು ಭಾಗದಲ್ಲಿ 41 ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ 9 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 6620 ಮಂದಿ ಆಶ್ರಯ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. (ಎನ್.ಬಿ)