
ಮೈಸೂರು,ಆ.22 : ಎಸ್ ಡಿಎಂಐಎಂಡಿ, ಎನ್ ಎಸ್ಇ ಮತ್ತು ಎನ್ ಎಸ್ ಡಿ ಎಲ್ ಸಂಸ್ಥೆಗಳ ಸಹಯೋಗದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಅರಿವು ಕಾರ್ಯಕ್ರಮವನ್ನು ನಾಳೆ (23) ಸಂಜೆ 6 ಗಂಟೆಗೆ ಚಾಮುಂಡಿತಪ್ಪಲಿನಲ್ಲಿರುವ ಎಸ್.ಡಿ.ಎಂ.ಐಎಂಡಿಯಲ್ಲಿ ಆಯೋಜಿಸಲಾಗಿದೆ ಎಂದು ಆರ್ಥಿಕ ತಜ್ಞ, ಸಂಚಾಲಕ ಡಾ.ಎಂ.ಶ್ರೀರಾಮ್ ತಿಳಿಸಿದರು.
ಬಂಡವಾಳ ಹೂಡಿಕೆಯ ವಿವಿಧ ಆಯಾಮಗಳ ಬಗ್ಗೆ ಮಾರುಕಟ್ಟೆ ತಜ್ಞರಾದ ಕುನಾಲು, ಡಾ.ಪರಶುರಾಮ್ ಹಾಗೂ ಎನ್. ಎಸ್.ಇ, ಎನ್. ಎಸ್ ಡಿ ಎಲ್ ಮತ್ತು ಇಂಟಿಗ್ರೇಟೆಡ್ ಎಂಟರ್ ಪ್ರೈಸಸ್ ಲಿಮಿಟೆಡ್ ನ ಅಧಿಕಾರಿಗಳು ಸಲಹೆ, ಸಮಾಲೋಚನೆ ಹಾಗೂ ಸಂವಾದ ನಡೆಸಲಿದ್ದಾರೆ ಎಂದು ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ, ಮಾಹಿತಿಗೆ ಮೊ.ಸಂ. ಡಾ.ಎಂ.ಶ್ರೀರಾಮ್ 9036096366, ಇಂಟಿಗ್ರೇಟೆಡ್ ಎಂಟರ್ ಪ್ರೈಸಸ್ ಲಿ. ನ ಚೇನತ್ ಆನಂದ್ 9902025624 ಅನ್ನು ಸಂಪರ್ಕಿಸಬಹುದಾಗಿದೆ.
ಸುನೀಲ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)