
ಮೈಸೂರು
ವೃದ್ಧೆಯ ಮೇಲೆ ಅತ್ಯಾಚಾರ; ವೃದ್ಧೆ ಸಾವು: ಆರೋಪಿ ವಶಕ್ಕೆ
ವೃದ್ಧೆಯೋರ್ವರ ಮೇಲೆ ಅತ್ಯಾಚಾರವೆಸಗಿ ಅವರ ಸಾವಿಗೆ ಕಾರಣನಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಮೈಸೂರಿನ ತಿಲಕ್ ನಗರದಲ್ಲಿ ನಡೆದಿದೆ.
ಅತ್ಯಾಚಾರವೆಸಗಿದವವನ್ನು ಕಿರಣ್(38) ಎಂದು ಗುರುತಿಸಲಾಗಿದ್ದು, ಅತ್ಯಾಚಾರಕ್ಕೊಳಗಾಗಿ ಆಘಾತದಿಂದ ಸಾವನ್ನಪ್ಪಿದ ವೃದ್ಧೆ ತುಳಸಮ್ಮ(65) ಎಂದು ಹೇಳಲಾಗಿದೆ. ಕಿರಣ್ ಡಿಸೆಂಬರ್ 18ರಂದು ರಾತ್ರಿ ತುಳಸಮ್ಮ ಎಂಬವರಿಗೆ ಮದ್ಯ ಕುಡಿಸಿ ಅವರ ಮೇಲೆ ಅತ್ಯಾಚಾರವೆಸಗಿದ್ದ. ಅತ್ಯಾಚಾರದಿಂದ ಆಘಾತಕ್ಕೊಳಗಾದ ತುಳಸಮ್ಮ ಆಸ್ಪತ್ರಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಸಾವನ್ನಪ್ಪಿದ್ದಾರೆ.
ಇದೀಗ ತುಳಸಮ್ಮ ಅವರ ಮಗಳು ಕಿರಣ್ ಮೇಲೆ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಕಿರಣ್ ನನ್ನು ವಶಕ್ಕೆ ಪಡೆದಿದ್ದಾರೆ. ಕಿರಣ್ ತುಳಸಮ್ಮ ಅವರಿಗೆ ದೂರದ ಸಂಬಂಧಿ ಎಂದು ತಿಳಿದು ಬಂದಿದೆ.