ಮೈಸೂರು

‘ಶ್ರಾವಣ ಬಂತು ನಾಡಿಗೆ, ಬಂತುಕಾಡಿಗೆ, ಬಂತು ಬೀಡಿಗೆ’ : ಮೈನವಿರೇಳಿಸಿದ ಶಾಸ್ತ್ರೀಯ ನೃತ್ಯ ಪ್ರದರ್ಶನ

ಮೈಸೂರು, ಆ.22-ಆರ್ಟಿಕ್ಯುಲೇಟ್ ನೃತ್ಯೋತ್ಸವ ಶಾಸ್ತ್ರೀಯವಾದ ನೃತ್ಯದ ಉತ್ಸವವಾಗಿರುತ್ತದೆ.ನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಇತ್ತೀಚೆಗೆ ಜರುಗಿದ 27ನೇ ಸರಣಿಯನ್ನು ನಮ್ಮೆಲ್ಲರನ್ನುಅಗಲಿದ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಮತ್ತು ದಕ್ಷಿಣ ಭಾರತದಲ್ಲಿ ಸ್ವಾಭಾವಿಕವಾದ ಕಂಟಕ ಹಾಗೂ ಕಷ್ಟದಲ್ಲಿರುವವರಿಗೆ ಈ ಸಂಚಿಕೆ ಸಮರ್ಪಣೆಯಾಯಿತು.

ಹೃದಯಕ್ಕೆ ನಾಟುವ ಪ್ರಾರ್ಥನೆಯೊಂದಿಗೆಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೃತ್ಯೋತ್ಸವದಲ್ಲಿ ನಾಲ್ಕು ಮಂದಿ ಯುವ ಕಲಾವಿದರನ್ನು ಸಂಸ್ಥೆಯ ಮುಖ್ಯಸ್ಥರಾದ ಮೈಸೂರು ಬಿ.ನಾಗರಾಜ್‍ ಪರಿಚಯಿಸಿದರು

ವಿನ್ಸೆಂಟ್ ಪೌಲ್ ರು ಭರತನಾಟ್ಯದ ಭಂಗಿಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದರು. ಇದರಲ್ಲಿ ಒಂದು ಅಭಿನಯ ಪ್ರಧಾನವಾದ ಶ್ರೀ ಕೃಷ್ಣ ಹಾಗೂ ಯಶೋದಳ ಬಗ್ಗೆಯದಾಗಿತ್ತು. ಮೊದಲನೆಯದಾಗಿ ವಿನಾಯಕನ ಸ್ಮರಣೆ (ಕೌತ್‍ವಾಮ್) ಹಾಗೂ ರಾಜರ ಪರಾಕ್‍ ಆಗಿತ್ತು. ಮೈಸೂರು ಕೋರ್ಟ್ ನೃತ್ಯಗಾತಿ ವೆಂಕಟಲಕ್ಷ್ಮಮ್ಮ ಸಂಯೋಜಿಸಿದ್ದರು. ಭಕ್ತನ ಹೃದಯದಲ್ಲಿ ನಾಟ್ಯವಾಡುವ ಶಿವನನ್ನು ತೋರಿಸುವ ನೃತ್ಯ ಮೂಲಕ ಮುಕ್ತಾಯಗೊಳಿಸಿದರು.

ರಾಖಿ ಕಾಮಿನಿ ಕೂಚಿಪುಡಿ ನೃತ್ಯ ಪ್ರದರ್ಶನದಲ್ಲಿ ಎರಡು ಕೀರ್ತನೆಯನ್ನು ಮತ್ತು ಒಂದುತಿಲ್ಲಾನವನ್ನು ಪ್ರದರ್ಶಿಸಿದರು. ಎರಡೂ ಕೀರ್ತನೆಗಳು ಸಂಸ್ಕೃತದಲ್ಲಿದ್ದು, ಒಂದು ಹಂಸಧ್ವನಿ ಹಾಗೂ ಇನ್ನೊಂದು ರಾಗಮಾಲಿಕಾ ದಲ್ಲಿತ್ತು.ಮೊದಲನೆಯದು ಅಣ್ಣಮ್ಮಾಚಾರ್ಯರ ಕೃತಿಯಾಗಿದ್ದು, ಎರಡನೆಯದು ಬಳ್ಳಾರಿ ಸಹೋದರರದಾಗಿತ್ತು.ಮೊದಲನೆಯದು ಗುರುವಿಗೆ ಅರ್ಪಿತವಾಗಿದ್ದು, ಇದು ವೆಂಕಟೇಶ್ವರ ದೇವರಿಗೆಸಮರ್ಪಿಸುವುದಾಗಿತ್ತು.ಎರಡನೆಯದು ಶಿವನಿಗೆ ಕೇಂದ್ರೀಕೃತವಾದುದಾಗಿತ್ತು.ರಾಖಿ ತನ್ನಆಯ್ಕೆಯ ಪ್ರದರ್ಶನದಿಂದ ಸಂಜೆಯ ಮೆರುಗನ್ನು ಹಾಗೂ ಅಭಿನಂದನೆಯನ್ನು ತರುವುದರ ಮೂಲಕ ಅದ್ಭುತ ನೃತ್ಯ ಪ್ರದರ್ಶನವನ್ನು ಪ್ರದರ್ಶಿಸಿದರು.

ಸಹನಾ ಆರ್.ಮೈಯಾ ಇವರು ಎರಡು ಒಡಿಸ್ಸಿ ನೃತ್ಯಗಳನ್ನು ಪ್ರದರ್ಶಿಸಿದರು. ಒಂದುಮಾಲ್‍ಕೌನ್ಸ್‍ರಾಗದಪಲ್ಲವಿಯಲ್ಲಿನ ಶುದ್ಧವಾದ ನೃತ್ಯ ಮತ್ತೊಂದು ಶ್ರೀ ಕೃಷ್ಣನ ಮೇಲಿನ ಪರಿಶುದ್ಧವಾದ ನೃತ್ಯಾಭಿನಯವಾಗಿತ್ತು. ಇದರಿಂದಾಗಿ ಕೋನಾರ್ಕ್‍ ದೇವಸ್ಥಾನದಲ್ಲಿ ಕೆತ್ತಿದ ಶಿಲಾಬಾಲಿಕೆಯರಿಗೆ ಜೀವ ಬಂದಂತೆ ಅನುಭೂತಿಯಾಯಿತು. ಶ್ರೀ ಕೃಷ್ಣ ಮತ್ತು ರಾಧೆಯನ್ನು ಒಂದುಗೂಡಿಸುವ ಸೇತುವೆಯಾದರು. ಶ್ರೀಕೃಷ್ಣನ ಹಾಗೂ ರಾಧೆಯ (ಕೋಪಗೊಂಡ) ಅಭಿನಯವನ್ನು ಅನೇಕ ವಿಧದಲ್ಲಿ ಹಾಗೂ ಚಲನೆಯ ಮೂಲಕ ತಮ್ಮ ಸಾತ್ವಿಕ ಅಭಿನಯದಿಂದ ನೃತ್ಯದ ಮೂಲಕ ಅಭಿನಯಿಸಿದರು.

ಪ್ರದ್ಯುಮ್ನಆಚಾರ್ಯ ಭರತನಾಟ್ಯದಲ್ಲಿ ಗಣೇಶನ ಕೌತ್‍ವಮ್‍ಹಾಗೂ ವರ್ಣಂರಾಮನ ಬಗ್ಗೆ ಪ್ರದರ್ಶಿಸಿದರು. ಗಣೇಶನ ಪ್ರಾರ್ಥನೆಯು ಶ್ರೀ ಮುತ್ತುಸ್ವಾಮಿ ದೀಕ್ಷಿತರ ರಚನೆ ಹಾಗೂ ವರ್ಣಂನಲ್ಲಿರಾಮನ ವೇದನೆಯ ಬಗ್ಗೆ ಪ್ರಸನ್ನಕುಮಾರ್ ರಚಿಸಿದ್ದಾರೆ.  ಸೀತೆಯು ಕಾಣೆಯಾದಾಗ ರಾಮನ ವೇದನೆ ಹಾಗೂ ನೋವನ್ನು ಬಹಳ ಸೊಗಸಾಗಿ ಅಭಿನಯಿಸಿದರು.ಅವನು ಹನುಮಂತನ ಆಗಮನದ ಬಗೆಗಿನ ಎದುರು ನೋಡುವಿಕೆಯ ಬಗ್ಗೆ ಹಾಗೂ ಅವನು ತರುವ ಸೀತೆಯು ಕ್ಷೇಮವಾಗಿರುವ ಬಗೆಗಿನ ಸುದ್ದಿಯ ಬಗ್ಗೆ ಎದುರು ನೋಡುತ್ತಿರುತ್ತಾರೆ.ಇವುಗಳ ಬಗ್ಗೆ ಅದ್ಭುತವಾದ ಪ್ರದರ್ಶನವನ್ನು ಮಾಡಿದರು.ಅವರ ಭರತನಾಟ್ಯದ ಪಾದದ ಚಲನೆಯು ಪಾದರಸದಂತೆ ಇದ್ದು, ಅತಿಯಾದ ಶಕ್ತಿ ಹಾಗೂ ಸಾಮರ್ಥ್ಯವನ್ನುಇದರಲ್ಲಿ ಹೊಂದಿರುವುದನ್ನು ಸೂಚಿಸಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: