ಮೈಸೂರು

ವಿವಿಧೆಡೆ ಇಂಜಿನಿಯರ್‍ಗಳ ದಿನಾಚರಣೆ : ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಗಳ ಸ್ಮರಣೆ

ಜೆ.ಎಲ್.ಬಿ ರಸ್ತೆ: ಸರ್ ಎಂ. ವಿಶ್ವೇಶ್ವರಯ್ಯ ಮಹಾನ್ ಸಾಧಕರು, ಚಿಂತಕರು, ಮತ್ತು ಇಡೀ ದೇಶವೇ ಯಾವತ್ತೂ ನೆನಪಿಡಬೇಕಾದ ತಂತ್ರಜ್ಞರು ಎಂದು ಮೂಡಾ ಮಾಜಿ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್ ಹೇಳಿದ್ದಾರೆ. ಮೈಸೂರಿನ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಏರ್ಪಡಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ 155ನೇ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ ಎಂ. ವಿಶ್ವೇಶ್ವರಯ್ಯನವರು ರಾಜ್ಯಕ್ಕೆ ಹಾಗೂ ಸಮಾಜಕ್ಕೆ ನೀಡಿದ ಹೊಡುಗೆ ಅಪಾರ. ಅವರು ಯಾವಾಗಲೂ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದರು. ಕೆ ಆರ್ ಎಸ್ ಡ್ಯಾಮ್ ನಿರ್ಮಾತೃವಾಗಿರುವುದರಿಂದ ಇವತ್ತಿಗೂ ಸಹ ಹಳೆಮೈಸೂರಿನ ಜನ, ಮದ್ದೂರು, ಮಂಡ್ಯ ಮತ್ತು ಸುತ್ತಮುತ್ತಲಿನವರು ಅವರನ್ನು ಸ್ಮರಿಸುತ್ತಾರೆ ಎಂದರು.  ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಗುರಿ ಇಟ್ಟುಕೊಂಡಿರುತ್ತಾರೆ. ಕೆಲವರು ವೈದ್ಯರು, ಇಂಜಿನಿಯರುಗಳು ವೃತ್ತಿಯನ್ನು ಬಯಸುತ್ತಾರೆ. ಅವರೆಲ್ಲರೂ ಸರ್ ಎಂ. ವಿಶ್ವೇಶ್ವರಯ್ಯನವರ ಹಾಗೆ ಉತ್ತಮ ಆತ್ಮವನ್ನು ಹೊಂದಿ ಸಮಾಜಕ್ಕೆ ಇನ್ನಷ್ಟು ಕೊಡುಗೆಗಳನ್ನು ನೀಡುವಂತಾಗಲಿ ಎಂದು ಶುಭಹಾರೈಸಿದರು. ವಾಂಗಿಪುರದ ನಂಬೀ ಮಠದ ಇಳೈ ಆಳ್ವಾರ್ ಸ್ವಾಮೀ, ಸಮಾಜ ಸೇವಕ ಕೆ. ರಘುರಾಮ್, ಅಜಯ್ ಶಾಸ್ತ್ರೀ, ನಿವೃತ್ತ ಇಂಜಿನಿಯರ್ ಸಿ.ಎನ್. ಬಾಬು ಮತ್ತಿತರರು ಉಪಸ್ಥಿತರಿದ್ದರು. ಎನ್‍ಐಇ ಗ್ರಂಥಾಲಯದಲ್ಲಿ ಇಂಜಿನಿಯರ್ ದಿನಾಚರಣೆ ಎನ್ಐಇ ಗ್ರಂಥಾಲಯದಲ್ಲಿ ಎನ್ಐಇ ಆಡಳಿತ ಸಮಿತಿ ಕಾರ್ಯದರ್ಶಿ ಎಸ್.ಕೆ. ಲಕ್ಷ್ಮೀನಾರಾಯಣ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಎನ್ಐಇ ಹಳೆ ವಿದ್ಯಾರ್ಥಿ, ಸ್ಟ್ರಕ್ಚರಲ್ ಇಂಜಿನಿಯರ್ ಎಂ.ಎಸ್. ವಿಜಯಶಂಕರ್ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಂಡರು. ಗೌರವಾನ್ವಿತ ಖಜಾಂಚಿ ಟಿ.ಕೆ. ಚಿತ್ತರಂಜನ್, ಎನ್ಐಇ ಆಡಳಿತ ಸಮಿತಿಯ ನಿರ್ದೇಶಕ ಎಸ್.ಎಲ್. ರಾಮಚಂದ್ರ, ಪ್ರಾಂಶುಪಾಲ ಜಿ.ಎಲ್. ಶೇಖರ, ಡೀನ್ ಡಾ.ಸುರೇಶ್, ಪ್ರೊ.ಡಾ.ಸುರೇಶ್, ಡಾ.ಸಿ.ವಿದ್ಯಾರಾಜ್, ಲೈಬ್ರರಿಯನ್ ವೈ.ಎಸ್.ಹರೀಶ್ ಮತ್ತಿತರರು ಉಪಸ್ಥಿತರಿದ್ದರು. ಚಾಮುಂಡಿ ಆಫೀಸರ್ಸ್ ಕ್ಲಬ್ ನಲ್ಲಿ ನೈಋತ್ಯ ರೈಲ್ವೆ ಇಂಜಿನಿಯರ್ ಅಸೋಸಿಯೇಶನ್ ವತಿಯಿಂದ ಇಂಜಿನಿಯರುಗಳ ದಿನಾಚರಣೆಯನ್ನು ಆಚರಿಸಲಾಯಿತು. ವಿಭಾಗೀಯ ರೈಲ್ವೆ ಅಧಿಕಾರಿ ಅತುಲ್ ಗುಪ್ತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

Leave a Reply

comments

Related Articles

error: