ಮೈಸೂರು

ಜಿಂಕೆ ಕೊಂದ ಬೇಟೆಗಾರ ಪರಾರಿ: ಮಾಂಸ ವಶಕ್ಕೆ ಪಡೆದ ಪೊಲೀಸರು

ಬೈಲಕುಪ್ಪೆ: ಜಿಂಕೆಯನ್ನು ಬಂದೂಕಿನಿಂದ ಕೊಂದು ಮಾಂಸ ಸಾಗಿಸುತ್ತಿದ್ದ ವ್ಯಕ್ತಿ ಅಧಿಕಾರಿಗಳನ್ನು ಕಂಡು ಮಾಂಸ ಬಿಟ್ಟು ಪರಾರಿಯಾಗಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ತಾಲೂಕಿನ ಆನೆ ಚೌಕೂರು ಸಿಪಿಟಿ 1 ಅರಣ್ಯದಲ್ಲಿ ಈ ಘಟನೆ ನಡೆದಿದ್ದು ರಾತ್ರಿಯ ವೇಳೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕಂಡು ಜಿಂಕೆಯ ತಲೆ, ಕಾಲು ಮಾಂಸ ಮತ್ತು ಬಂದೂಕನ್ನು ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ.

ಈ ಬಗ್ಗೆ ವಲಯ ಅರಣ್ಯಾಧಿಕಾರಿ ಗಿರೀಶ್‌ ಅವರು ದೂರು ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಶೋಧನೆ ಕೈಗೊಂಡಿದ್ದಾರೆ. ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ನಂಜಪ್ಪ, ವೀರೇಶ್, ಸೇರಿದಂತೆ ಮತ್ತಿತರ ಅರಣ್ಯಾಧಿಕಾರಿಗಳು ಹಾಜರಿದ್ದರು.

ವರದಿ: ರಾಜೇಶ್

Leave a Reply

comments

Related Articles

error: