ಪ್ರಮುಖ ಸುದ್ದಿಮೈಸೂರು

ಕೊಡಗಿನ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿಲ್ಲವೆಂದು ಅವಾಚ್ಯ ಶಬ್ದ ಬಳಸಿ ಟೀಕಿಸಿದ್ದಕ್ಕೆ ಖಡಕ್ ಎಚ್ಚರಿಕೆ ನೀಡಿದ ಸಂಸದ ಪ್ರತಾಪ್ ಸಿಂಹ

ಮೈಸೂರು,ಆ.23:- ಕೊಡಗಿನ ನೆರೆ ಸಂತ್ರಸ್ತರ ನೆರವಿಗೆ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಧಾವಿಸಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದ ಬಳಸಿ ಟೀಕಿಸಿದ್ದ ಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಾಯಿಗೆ ಬಂದ ಹಾಗೆ ಕಮೆಂಟ್ ಮಾಡೋದು ಸರಿಯಲ್ಲ. ನನಗೂ ಎಲ್ಲಾ ಭಾಷೆಯಲ್ಲೂ ಬೈಯ್ಯಲು ಬರತ್ತೆ. ನೀವು ನಿಮ್ಮ ನಿಮ್ಮ ಪಕ್ಷದ ಬಗ್ಗೆ ನಿಷ್ಠೆ ಇಟ್ಟುಕೊಳ್ಳಿ, ಆದರೆ ಬಳಸುವ ಭಾಷೆ ಸರಿ ಇರಲಿ ಎಂದು ಕಿವಿಮಾತು ಹೇಳಿದ್ದಾರೆ.

ನಾನು ಉತ್ತರ ಕರ್ನಾಟಕ, ತುಳು ಭಾಷೆಯಲ್ಲೂ ಮಾತಾಡುತ್ತೇನೆ. ಆದರೆ ನನಗೆ ನಿಮ್ಮಂತಹ ಹೀನ ಸಂಸ್ಕೃತಿ ಇಲ್ಲ. ಎಲ್ಲರಿಗೂ ಒಂದೊಂದು ಪಕ್ಷ ಇರುತ್ತೆ. ಹಾಗಂತ ಬಾಯಿಗೆ ಬಂದ ಹಾಗೆ ಇನ್ನೊಬ್ಬರನ್ನು ಟೀಕಿಸಬಾರದು. ನೀವು ಮಾತಾಡುವ ಭಾಷೆಯಲ್ಲಿ ನನಗೂ ಮಾತನಾಡಲು ಬರುತ್ತೇ, ಆದರೆ ಅದು ಅಸಹ್ಯ ಆಗುತ್ತೆ. ಟೀಕಿಸಿ, ಟೀಕಿಸಬೇಡಿ ಎಂದಿಲ್ಲ. ಒಳ್ಳೆಯ ಭಾಷೆಯಲ್ಲಿ ಟೀಕೆ ಮಾಡಿ ಎಂದು ಟೀಕಾಕಾರರಿಗೆ ಸಿಂಹ ಸಲಹೆ ಮಾಡಿದ್ದಾರೆ.

ಕೊಡಗಿನಲ್ಲೇ ಇರುತ್ತೇನೆ

ಕೊಡಗು ಕೊಚ್ಚಿ ಹೋಗುತ್ತಿದೆ, ಪ್ರತಾಪ್ ಸಿಂಹ ಎಲ್ಲಿ ಎಂದು ಪ್ರಶ್ನೆ ಮಾಡುತ್ತೀರಲ್ಲ, ನಾನು ಮಳೆ ಪ್ರಾರಂಭವಾದಾಗಿನಿಂದಲೂ ಕೊಡಗಿನಲ್ಲೇ ಇದ್ದೇನೆ ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ. ನಾನು ಹಾಗೂ ನನ್ನ ಕಾರ್ಯಕರ್ತರು ಸಂತ್ರಸ್ತರ ನೆರವಿಗೆ ಧಾವಿಸಿದ್ದೇವೆ. ಮೊದಲು ನಾವೇ ಅಲ್ಲಿ ಪರಿಹಾರ ಕೇಂದ್ರ ತೆರೆದಿದ್ದು. ಈಗಲೂ ನಾವು ಇಲ್ಲೇ ಇದ್ದು ಅವರ ಬೆಂಬಲಕ್ಕೆ ನಿಂತಿದ್ದೇವೆ. ಇನ್ನಾದರೂ ಅವಾಚ್ಯ ಶಬ್ದ ಬಳಕೆ ಮಾಡದೇ ಒಳ್ಳೆಯ ಶಬ್ದಗಳಿಂದ ಟೀಕೆ ಮಾಡಿ. ನನಗೂ ಆ ರೀತಿ ಮಾತಾಡೋಕೆ ಬರುತ್ತೆ ಎಂದು ಫೇಸ್‍ಬುಕ್ ಲೈವ್ ಮಾಡಿ ಟೀಕಿಸುವವರಿಗೆ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: