ಮೈಸೂರು

ಗುಂಡಿಯಲ್ಲಿ ಮುಳುಗಿ ಬಾಲಕರ ಸಾವು

ಮೈಸೂರು,ಆ.23:- ಕೆರೆ ಆವರಣದಲ್ಲಿದ್ದ ಗುಂಡಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕಂಚಮಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕಂಚಮಳ್ಳಿ ಗ್ರಾಮದ ನಾಗರಾಜು ಅವರ ಪುತ್ರ ಅಜಯ್ (10)ಹಾಗೂ ಸುಜಾತಾ ಎಂಬವರ ಪುತ್ರ ಸಾಗರ್(10)ಎಂದು ಗುರುತಿಸಲಾಗಿದೆ. ಇವರು ಕೆರೆ ಆವರಣದಲ್ಲಿನ ಗುಂಡಿಯಲ್ಲಿ ನೀರು ತೆಗೆದುಕೊಳ್ಳಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ನೀರು ತೆಗೆದುಕೊಳ್ಳುವ ವೇಳೆ ಕಾಲುಜಾರಿದ್ದು, ಗುಂಡಿ ಸುಮಾರು ಹತ್ತು ಅಡಿ ಆಳವಿತ್ತು ಎನ್ನಲಾಗಿದೆ. ಸುರಿದ ಭಾರೀ ಮಳೆಗೆ ಗುಂಡಿ ತುಂಬಿದ್ದು, ಆಸುಪಾಸಿನಲ್ಲಿ ಜನ ಸಂಚಾರವಿಲ್ಲದ ಕಾರಣ ಯಾರ ಗಮನಕ್ಕೂ ಬಂದಿಲ್ಲ. ಸಂಜೆಯಾದರೂ ಮಕ್ಕಳು ಮನೆಗೆ ಬಾರದಿರುವುದನ್ನು ಕಂಡು ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ ವೇಳೆ ಗುಂಡಿಯಲ್ಲಿ ಮಕ್ಕಳ ಮೃತದೇಹ ಕಂಡು ಬಂದಿದೆ ಎನ್ನಲಾಗಿದೆ. ಇವರಿಬ್ಬರು ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: