ಕ್ರೀಡೆ

ಇಂಗ್ಲೆಂಡ್ ವಿರುದ್ಧದ ಕೊನೆಯ 2 ಟೆಸ್ಟ್ ಗೆ ಭಾರತ ತಂಡ ಪ್ರಕಟ: ಪೃಥ್ವಿ, ವಿಹಾರಿ ಆಯ್ಕೆ

ನವದೆಹಲಿ,ಆ.23-ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಹನುಮ ವಿಹಾರಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮುಂಬೈನ ಯುವ ಆರಂಭಿಕ ಆಟಗಾರ ಪೃಥ್ವಿ ಶಾ, ಮುರಳಿ ವಿಜಯ್ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿಹಾರಿ, ಪೃಥ್ವಿ ಆಯ್ಕೆಯಿಂದಾಗಿ ಮುರಳಿ ವಿಜಯ್ ಹಾಗೂ ಕುಲ್ದೀಪ್ ಯಾದವ್ ಅವಕಾಶ ವಂಚಿತರಾಗಿದ್ದಾರೆ. ಇನ್ನು ಗಾಯದಿಂದಾಗಿ ಪುನಶ್ಚೇತನದ ಹಂತದಲ್ಲಿರುವ ಭುವನೇಶ್ವರ್ ಕುಮಾರ್ ಅವರನ್ನು ಪರಿಗಣಿಸಲಾಗಿಲ್ಲ.

ನಿಜ ಹೇಳಬೇಕೆಂದರೆ ನಾನಿದನ್ನು ನಿರೀಕ್ಷಿಸಿಯೇ ಇರಲಿಲ್ಲ. ನಾನು ಇಂದಿನಿಂದ (ಗುರುವಾರ) ಆರಂಭವಾಗಲಿರುವ ಚತುಷ್ಕೋನ ಸರಣಿಗೆ ತಯಾರಿ ನಡೆಸುತ್ತಿದ್ದೆ. ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು ನನಗೆ ಅಚ್ಚರಿ ತಂದಿದೆ. ನಾನು ನಾಳೆಯೇ ಇಂಗ್ಲೆಂಡ್‌ಗೆ ತೆರಳುವೆ ಎಂದು ವಿಹಾರಿ ಹೇಳಿದ್ದಾರೆ.

3ನೇ ಟೆಸ್ಟ್ ಪಂದ್ಯವನ್ನು ಭಾರತ 203 ರನ್ ಗಳಿಂದ ಗೆದ್ದುಕೊಂಡ ಬಳಿಕ ಭಾರತದ ಆಯ್ಕೆಗಾರರು ಸರಣಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಿದ್ದಾರೆ.

ಕೊನೆಯ 2 ಟೆಸ್ಟ್‌ಗೆ ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವೀಂದ್ರ ಜಡೇಜ, ಜಸ್‌ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ, ಮುಹಮ್ಮದ್ ಶಮಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಕರುಣ್ ನಾಯರ್, ದಿನೇಶ್ ಕಾರ್ತಿಕ್(ವಿಕೆಟ್‌ಕೀಪರ್), ಹನುಮ ವಿಹಾರಿ. (ಎಂ.ಎನ್)

Leave a Reply

comments

Related Articles

error: