ಪ್ರಮುಖ ಸುದ್ದಿಮೈಸೂರು

ಚಾಮರಾಜನಗರದಲ್ಲಿ ಸರ್ಕಾರಿ ಶಿಕ್ಷಕನ ಮನೆ ಮೇಲೆ ಎಸಿಬಿ ದಾಳಿ

ಚಾಮರಾಜನಗರದಲ್ಲಿ ಗುರುವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದ ಹಿನ್ನೆಲೆಯಲ್ಲಿ ಉಪ್ಪಾರ ಬಡಾವಣೆಯ ಸರಕಾರಿ ಶಾಲಾ ಶಿಕ್ಷಕ ರೇಚಣ್ಣ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಭ್ರಮರಾಂಭ ಬಡಾವಣೆ ನಿವಾಸ. ಹಂಡ್ರಕಳ್ಳಿಯಲ್ಲಿರೋ ಮನೆ ಹಾಗೂ ಆಲೂರಿನಲ್ಲಿರುವ ಶಿಕ್ಷಕನ ಮಾವನ ಮನೆ ಈ ಮೂರು ಕಡೆ ಏಕಕಾಲಕ್ಕೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ಡಿವೈಎಸ್‍ಪಿ ಪ್ರಬಾಕರ್ ರಾವ್ ಶಿಂಧೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ.

Leave a Reply

comments

Related Articles

error: