ಪ್ರಮುಖ ಸುದ್ದಿ

ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು : ಉದ್ಯಮಿ ಜಿ.ಆರ್.ಅಶ್ವತ್ಥ ನಾರಾಯಣ್

ರಾಜ್ಯ( ಚಾಮರಾಜನಗರ)ಆ.23:- ಪರಿಸರ ನಾಶದಿಂದ ಅನಾಹುತಗಳು ಹೆಚ್ಚಾಗುತ್ತದೆ. ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಚಾಮರಾಜನಗರ ಉದ್ಯಮಿ ಜಿ.ಆರ್.ಅಶ್ವತ್ಥ ನಾರಾಯಣ್ ತಿಳಿಸಿದರು.

ನಗರದ ನಂಜನಗೂಡು ರಸ್ತೆಯಲ್ಲಿ ಇರುವ ಚಿರಶಾಂತಿಧಾಮದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್, ಹಾಗೂ ಆರ್ಯವೈಶ್ಯ ಮಂಡಲಿ ವತಿಯಿಂದ ಪರಿಸರ ಉಳಿಸುವ ಅಂಗವಾಗಿ ಸಾಲುಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಾಮರಾಜನಗರ ಜಿಲ್ಲೆ ಹೆಚ್ಚು ಕಾಡನ್ನು ಹೊಂದಿದ ಪ್ರದೇಶವಾಗಿದೆ. ನಮ್ಮ ಪರಿಸರವು ಶುದ್ಧವಾಗಿರ ಬೇಕಾದರೆ ಮರಗಳನ್ನು ರಕ್ಷಿಸಿ ಗಿಡಗಳನ್ನು ಬೆಳೆಸಬೇಕು. ಇದರಿಂದ ಶುದ್ಧಗಾಳಿಯನ್ನು ಪಡೆಯ ಬಹುದು ಎಂದು ತಿಳಿಸಿದರು.

ಈಶ್ವರಿ ಸೋಷಿಯಲ್ ಟ್ರಸ್ಟ್ ಸಂಸ್ಥಾಪಕ ಪರಸರ ಪ್ರೇಮಿ ಸಿ.ಎಂ.ವೆಂಕಟೇಶ್ ಮಾತನಾಡಿ ನಮ್ಮ ಸಂಸ್ಥೆಯ ವತಿಯಿಂದ 10000 ಸಾವಿರ ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ. ನಮ್ಮ ಸಂಸ್ಥೆಯ ಗುರಿ ಪಟ್ಟಣ ಪ್ರದೇಶವನ್ನು ಹಸಿರು ಪ್ರದೇಶವನ್ನಾಗಿ ಮಾಡಬೇಕೆನ್ನುವುದಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.

ಈಸಂದರ್ಭದಲ್ಲಿ ಚಿರಶಾಂತಿ ಧಾಮದಲ್ಲಿ 20 ಗಿಡಗಳನ್ನು ನೆಡಲಾಯಿತು.ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಲಿಯ ಸದಸ್ಯರಾದ ಶ್ರೀನಿವಾಸಶೆಟ್ಟಿ, ಕುಮಾರ್,ಸುಬ್ಬಣ್ಣ, ಎಂ.ಕೆ. ಗೋವಿಂದರಾಜು, ಸುರೇಶ್, ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: