ಮೈಸೂರು

ಕೊಡಗಿನ ನೆರೆ ಸಂತ್ರಸ್ತರ ಸಹಾಯಾರ್ಥ ಆ.26ರಂದು ‘ಅಲೀಬಾಬಾ ಮತ್ತು ನಲವತ್ತು ಕಳ್ಳರು’ ನಾಟಕ ಪ್ರದರ್ಶನ

ಮೈಸೂರು,ಆ.23:- ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಕೊಡಗಿನ ನೆರೆ ಸಂತ್ರಸ್ತರ ಸಹಾಯಾರ್ಥ ಆ.26ರಂದು ‘ಅಲೀಬಾಬಾ ಮತ್ತು ನಲವತ್ತು ಕಳ್ಳರು’ ನಾಟಕ  ಪ್ರದರ್ಶನಗೊಳ್ಳಲಿದೆ.

ತನ್ನ ಚಟುವಟಿಕೆಯ ಭಾಗವಾಗಿ ಸದಭಿರುಚಿಯ ಸಹೃದಯ ಪ್ರೇಕ್ಷಕರನ್ನು ಹುಟ್ಟುಹಾಕಲು ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದು, ಇದೇ ಆಗಸ್ಟ್ 26ರಂದು ಸಂಜೆ 6.30ಕ್ಕೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿಡಾ. ಚಂದ್ರಶೇಖರ ಕಂಬಾರರು ರಚಿಸಿರುವ, ರಾಜು ಅನಂತಸ್ವಾಮಿ ಅವರು ಸಂಗೀತ ಸಂಯೋಜಿಸಿರುವ, ಮಂಡ್ಯ ರಮೇಶ್ ನಿರ್ದೇಶನದ ‘ಅಲಿಬಾಬಾ ಮತ್ತು ನಲವತ್ತು ಕಳ್ಳರು’ ಎಂಬ ನಾಟಕದ ಪ್ರದರ್ಶನವನ್ನು ಏರ್ಪಡಿಸಿದೆ.  ಈ ನಾಟಕವು ಈಗಾಗಲೇ ಅನೇಕ ಪ್ರಯೋಗಗಳನ್ನು ಕಂಡಿದ್ದು, ಪ್ರದರ್ಶನವಾದಲ್ಲೆಲ್ಲಾ ಅಪಾರ ಮೆಚ್ಚುಗೆಯನ್ನು ಗಳಿಸಿ ಇದೀಗ ಮೈಸೂರಿನ ಸದಭಿರುಚಿಯ ಪ್ರೇಕ್ಷಕರನ್ನು ರಂಜಿಸಲು ಪ್ರದರ್ಶನಗೊಳ್ಳುತ್ತಿದೆ.

ನಟನವು ಈ ನಾಟಕದ ಮೂಲಕ ಬರುವ ಸಹಾಯಧನವನ್ನು ಕೊಡಗು ಜನರ ನೋವಿಗೆ ಸ್ಪಂದಿಸಲು, ನೆರೆ ಸಂತ್ರಸ್ತರಿಗೆ ನೆರವು ನೀಡಲು ಬಳಸಲಿದೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9945555570, 9480468327 ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: