ಮೈಸೂರು

ಸಂವಿಧಾನ ಸುಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ

ಮೈಸೂರು,ಆ.23-ನವದೆಹಲಿಯ ಜಂತರ್-ಮಂತರ್ ನಲ್ಲಿ ಸಂವಿಧಾನ ಸುಟ್ಟಿರುವುದುನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

ಸಂವಿಧಾನವನ್ನು ಸುಡುವ ಮೂಲಕ ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಗೆ ಅವಮಾನ ಮಾಡಲಾಗಿದೆ. ಈ ರೀತಿ ಸಂವಿಧಾನಕ್ಕೆ ಬೆಂಕಿ ಹಾಕಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸುರೇಶ್ ಯರಗನಹಳ್ಳಿ, ವಾಟಾಳ್ ನಾಗರಾಜ್, ತಿ.ನರಸೀಪುರ ಪುಟ್ಟಸ್ವಾಮಿ ದೇವರಸಹಳ್ಳಿ, ಮಹೇಶ ಹರದನಹಳ್ಳಿ, ಮರಿಸ್ವಾಮಿ ಹೊಸೂರು ನಂಜನಗೂಡು, ದೇವರಾಜ್ ಅನಗಟ್ಟಿ ಎಚ್.ಡಿ.ಕೋಟೆ, ಕೃಷ್ಣಕೊಳಗಟ್ಟ ಹುಣಸೂರು ಇತರರು ಭಾಗವಹಿಸಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: