ಮೈಸೂರು

ರಾಘವೇಂದ್ರ ಸ್ವಾಮೀಜಿಯವರ ಆರಾಧನೆ : ಸಂಗೀತೋತ್ಸವ

ಮೈಸೂರು,ಆ.23 : ಕೃಷ್ಣಮೂರ್ತಿಪುರಂನ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಸಂಗೀತೋತ್ಸವನವನ್ನು ಆ.27 ರಿಂದ 29ರವರೆಗೆ ಸನ್ನಿಧಾನದ ತತ್ವಜ್ಞಾನಮಂದಿರದಲ್ಲಿ ಏರ್ಪಡಿಸಲಾಗಿದೆ.

ಆ.27ರಂದು ವಿದ್ವಾನ್ ಎಂ.ಕೆ.ಪ್ರಾಣೇಶ್ ಅವರ ವೀಣಾವಾದನ, ಆ.28 ರಂದು ವಿದ್ವಾನ್ ಮೈಸೂರು ಎಂ.ಎ.ಪ್ರಹ್ಲಾದ್ ಅವರಿಂದ ಭಕ್ತಿಗೀತೆಗಳು, ಹಾಗೂ ಆ.29ರಂದು ಮೈಸೂರು ಎಂ.ನಾಗರಾಜ್ ಮತ್ತು ಮೈಸೂರು ಸುಮಂತ್ ಅವರಿಂದ ದ್ವಂದ್ವ ಪಿಟೀಲು ವಾದನವಿರುವುದು

ಅಲ್ಲದೇ ಆ.25,26ರಂದು ಬೆಳಗ್ಗೆ 6 ಗಂಟೆಗೆ ಕ್ರಮವಾಗಿ ಋಗ್ವೇದ ಹಾಗೂ ಯರ್ಜುವೇದ ಉಪಾಕರ್ಮವನ್ನು ವಿ.ಹರೀಶಾಚಾರ್ಯ ಅವರು ನೆರವೇರಿಸುವರು  ಎಂದು ಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: