ಮೈಸೂರು

ರಂಗಭೂಮಿ ಕಲಾವಿದರಿಗೆ ಸೂಕ್ತ ಪರಿಹಾರ ಒದಗಿಸಿ

ರಾಜ್ಯ ಸರಕಾರ ಕಲಾವಿದರಿಗೆ ಯಾವುದೇ ಪರಿಹಾರ ಧನ ಅಥವಾ ನಿವೃತ್ತ ವೇತನದ ಸೌಲಭ್ಯ ನೀಡುತ್ತಿಲ್ಲ. ಕೂಡಲೇ ಸರಕಾರ ಈ ಬಗ್ಗೆ ಕ್ರಮ ಕೈಗೊಂಡು ಕಲಾವಿದರಿಗೆ ಸೂಕ್ತ ಪರಿಹಾರ ಒದಗಿಸಬೇಕು ಇಲ್ಲವಾದಲ್ಲಿ ಕರ್ನಾಟಕದ ಎಲ್ಲ ಕಲಾವಿದರನ್ನು ಒಟ್ಟು ಸೇರಿಸಿ ಹಂತಹಂತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಕಲಾವಿದರು ಎಚ್ಚರಿಸಿದರು.

ಗುರುವಾರದಂದು ರಂಗಾಯಣದ ಭೂಮಿಗೀತದಲ್ಲಿ ಸಭೆ ಸೇರಿದ 15ಕ್ಕೂ ಹೆಚ್ಚು ಕಲಾವಿದರು ಈ ನಿರ್ಣಯ ಕೈಗೊಂಡರು. ರಂಗಾಯಣ ಕಲಾವಿದ ಮಂಜುನಾಥ ಅಕಾಲಿಕ ಮರಣ ಹೊಂದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸುಮಾರು ಹಿರಿಯ ಕಲಾವಿದರು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. 27 ವರ್ಷ ಅವರು ಕಲೆಯನ್ನು ಪೋಷಿಸಿದ್ದಕ್ಕೆ ನಿವೃತ್ತಿ ಹೊಂದಿದ ಬಳಿಕ ಬೀದಿಗೆ ಬರಬೇಕಾಗುತ್ತದೆ.

3 ವರ್ಷದ ಹಿಂದೆ ಉಪ ಸಮಿತಿಯೊಂದು ಕಲಾವಿದರ ಬೇಡಿಕೆಗಳ ಬಗ್ಗೆ ರಾಜ್ಯ ಸರಕಾರಕ್ಕೆ ವರದಿ ನೀಡಿದೆ. ಈ ಬೇಡಿಕೆಗಳನ್ನು ಹಣಕಾಸು ಸಚಿವ ಮತ್ತು ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿ ನೆರವೇರಿಸಬೇಕು ಎಂದು ಬುಧವಾರದಂದು ರಂಗಾಯಣಕ್ಕೆ ಆಗಮಿಸಿದ್ದ ಸಚಿವೆ ಉಮಾಶ್ರೀ ಅವರು ಹೇಳಿದ್ದರು. ಹಾಗಾಗಿ ಸರಕಾರ ಕೂಡಲೇ ಕಲಾವಿದರ ಬೇಡಿಕೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಕಲಾವಿದರು ಒತ್ತಾಯಿಸಿದರು.

Leave a Reply

comments

Related Articles

error: