ಮೈಸೂರು

ವಾಹನಕ್ಕೆ ಅಡ್ಡ ಬಂದ ಶ್ವಾನ ರಕ್ಷಿಸಲು ಹೋಗಿ ಚಾಲಕ ಸಾವು

ಮೈಸೂರು,ಆ.24:- ವಾಹನಕ್ಕೆ ಅಡ್ಡ ಬಂದ ಶ್ವಾನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ಚಾಲಕರೋರ್ವರು ಮೃತಪಟ್ಟ ಘಟನೆ ಹಿನಕಲ್ ರಿಂಗ್ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಪ್ರಕಾಶ್(33)ಎಂದು ಹೇಳಲಾಗಿದ್ದು, ಕಾರಿನಲ್ಲಿದ್ದ ಅವರ ಸಹೋದರ ರಾಜೇಂದ್ರ ಅವರಿಗೆ ಗಂಭೀರ ಗಾಯಗಳಾಗಿವೆ. ಬುಧವಾರ ಸಂಜೆ ಹಿನಕಲ್ ರಿಂಗ್ ರಸ್ತೆಯಲ್ಲಿ ಬೋಗಾದಿ ಕಡೆಯಿಂದ ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆಗಡ್ಡವಾಗಿ ಬಂದ ಶ್ವಾನವನ್ನು ರಕ್ಷಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ.  ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಕಾಶ್ ಸಾವನ್ನಪ್ಪಿದ್ದಾರೆ. ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: