ಕರ್ನಾಟಕಪ್ರಮುಖ ಸುದ್ದಿ

ಎಚ್‍.ಎ.ಎಲ್‍.ಯಿಂದ ಅಪ್ರೆಂಟಿಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನ

ಮಂಡ್ಯ (ಆ.24): ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್, ಟೆಕ್ನಿಕಲ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ಬೆಂಗಳೂರು, ಇವರು ಶಿಶಿಕ್ಷು ತರಬೇತಿ (Apprenticeship Training) ಗೆ ಫಿಟ್ಟರ್, ಟರ್ನರ್, ಮೆಷಿನಿಷ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಪಾಸಾ (PASSA), ಫೌಂಡ್ರಿಮ್ಯಾನ್ ಮತ್ತು ಶೀಟ್‍ಮೆಟಲ್ ವರ್ಕರ್ ಟ್ರೇಡ್‍ಗಳಲ್ಲಿ ಐ.ಟಿ.ಐ ಪಾಸಾಗಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ತೇರ್ಗಡೆ ಮತ್ತು ಅಂಗೀಕೃತ ಸಂಸ್ಥಯಿಂದ ಪಡೆದ ಐ.ಟ.ಐ. ತರಬೇತಿಮೀಸಲಾತಿ ಬಯಸುವವರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಢ/ಒಬಿಸಿ/ಹಾಗೂ ಅಂಗವಿಕಲ ಅಭ್ಯರ್ಥಿಗಳು ಸಕ್ಷಮ ಪಾಧಿಕಾರದಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸುವುದು.

ಉದ್ಯೋಗ ವಿನಿಮಯ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಂಡಿರುವ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕಚೇರಿಯಲ್ಲಿ ಅರ್ಜಿ ನಮೂನೆಗಳನ್ನು ಪಡೆದು ದಿನಾಂಕ: 17.09.2018 ರ ಒಳಗೆ ಭರ್ತಿಮಾಡಿದ ಅರ್ಜಿಗಳನ್ನು ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಒಂದು ಭಾವಚಿತ್ರ ಮತ್ತು ಅಗತ್ಯ ದಾಖಲೆಗಳೊಡನೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಡ್ಯ ಇಲ್ಲಿಗೆ ಕಚೇರಿ ವೇಳೆಯಲ್ಲಿ ಬಂದು ಸಲ್ಲಿಸುವುದು.

ಅರ್ಜಿಸಲ್ಲಿಸುವ ಮುನ್ನ Apprenticeship portal www.apprenticeship.gov.in ಅಲ್ಲಿ ಲಾಗಿನ್ ಆಗಿ DV Apprenticeship Reg. Num ಪಡೆದುಕೊಂಡು ಅರ್ಜಿಯಲ್ಲಿ ಭರ್ತಿಮಾಡಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: