ಮೈಸೂರು

ಸಮಾನ ಕೆಲಸಕ್ಕಾಗಿ ಸಮಾನ ವೇತನ ಜಾರಿ ಮಾಡಲು ಆಗ್ರಹ: ಸಿಐಟಿಯು ಪ್ರತಿಭಟನೆ

ಸಮಾನ ಕೆಲಸಕ್ಕಾಗಿ ಸಮಾನ ವೇತನದ 2016 ಅಕ್ಟೇಬರ್ 10 ರ ಸುಪ್ರೀಂ ಕೋರ್ಟ್ ತೀರ್ಪು ಜಾರಿಗೊಳಿಸುವಂತೆ ಕೋರಿ ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಜಿಲ್ಲಾ ಸಮಿತಿಯು ಗುರುವಾರದಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಎಲ್ಲ ಕೈಗಾರಿಕೆಗಳು, ವಲಯಗಳು ಮತ್ತು ರಾಷ್ಟ್ರದ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳು, ಸ್ವಾಯತ್ತ ಸಂಸ್ಥೆಗಳು ಮುಂತಾದ ಕಡೆಗಳಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ತಪ್ಪಿತಸ್ಥ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಬೇಕು. ಕೇಂದ್ರದ ನಿಯಮಾವಳಿಗಳ ಬದಲು ಗುತ್ತಿಗೆ ಕಾರ್ಮಿಕರ ಕಾಯಿದೆಗೆ ಸೂಕ್ತ ತಿದ್ದಪಡಿ ತರಬೇಕು. ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳು ಖಾಯಂ ಅಲ್ಲದ ಕಾರ್ಮಿಕರನ್ನು ಖಾಯಂಗೊಳಿಸಲು ರೂಪಿಸಿದ ಶಾಸನವನ್ನು ಕರ್ನಾಟಕದಲ್ಲೂ ರಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Leave a Reply

comments

Related Articles

error: