ಕ್ರೀಡೆ

ಆರ್ ಸಿಬಿಗೆ ಮೇಜರ್ ಸರ್ಜರಿ: ತಂಡದ ಹೆಡ್ ಕೋಚ್ ವಜಾ

ಬೆಂಗಳೂರು,ಆ.24-2019ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಬಲಿಷ್ಠ ತಂಡ ರೂಪಿಸಲು ಆರ್ ಸಿಬಿ ಮುಂದಾಗಿದ್ದು, ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ.

ತಂಡದ ಹೆಡ್ ಕೋಚ್ ಡೆನಿಯಲ್ ವೆಟ್ಟೋರಿ ಸೇರಿದಂತೆ ಸಪೋರ್ಟ್ ಸ್ಟಾಫ್‌ಗಳನ್ನ ವಜಾ ಮಾಡಿದೆ. ಹೆಡ್ ಕೋಚ್ ವೆಟ್ಟೋರಿ ಸ್ಥಾನಕ್ಕೆ ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕಸರ್ನ್ ಆಯ್ಕೆ ಮಾಡೋ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿಯ ಕಳಪೆ ಪ್ರದರ್ಶನದಿಂದ ಆರ್‌ಸಿಬಿ ಫ್ರಾಂಚೈಸಿ ಈ ನಿರ್ಧಾರ ತೆಗೆದುಕೊಂಡಿದೆ.

ಆದರೆ ಕಳೆದ ಬಾರಿ ಆರ್‌ಸಿಬಿ ತಂಡದ ಬೌಲಿಂಗ್ ಕೋಚ್ ಜವಾಬ್ದಾರಿ ನಿರ್ವಹಿಸಿದ ಆಶಿಶ್ ನೆಹ್ರಾ ಮುಂದಿನ ಐಪಿಎಲ್‌ನಲ್ಲೂ ಮುಂದುವರಿಯಲಿದ್ದಾರೆ.

ಜನಪ್ರಿಯ ತಂಡಗಳಲ್ಲಿ ಒಂದಾಗಿರುವ ಆರ್ ಸಿಬಿ ಕಳೆದ 11 ವರ್ಷಗಳಿಂದ ಪ್ರಶಸ್ತಿಗಾಗಿ ಹೋರಾಡುತ್ತಲೇ ಇದೆ. ಕಳೆದ ಐಪಿಎಲ್ ಟೂರ್ನಿಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದು ನಿರಾಸೆ ಅನುಭವಿಸಿತ್ತು. (ಎಂ.ಎನ್)

Leave a Reply

comments

Related Articles

error: