ಕ್ರೀಡೆ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜಿಂಬಾಬ್ವೆ ತಂಡದ ಕೋಚ್ ಆಗಿ ಆಯ್ಕೆ

ನವದೆಹಲಿ,ಆ.24-ಭಾರತ ತಂಡದ ಮಾಜಿ ಕ್ರಿಕೆಟಿಗ ಲಾಲ್ ಚಂದ್ ರಜಪೂತ್ ಅವರನ್ನು ಜಿಂಬಾಬ್ವೆ ತಂಡದ ನೂತನ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.

ಕಳೆದ ಜೂನ್‌ನಿಂದ ಜಿಂಬಾಬ್ವೆ ತಂಡದ ಹಂಗಾಮಿ ಕೋಚ್ ಆಗಿ ಸೇವೆಸಲ್ಲಿಸುತ್ತಿದ್ದ ಲಾಲ್ ಚಂದ್ ರಜಪೂತ್ ಇದೀಗ ಪೂರ್ಣಾವಧಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ  ಜಿಂಬಾಬ್ವೆ ನಡುವಿನ ತ್ರಿಕೋನ ಸರಣಿಯಲ್ಲಿ ರಜಪೂತ್ ಹಂಗಾಮಿ ಕೋಚ್ ಆಗಿದ್ದರು.

ಅಫ್ಘಾನಿಸ್ತಾನ ತಂಡಕ್ಕೆ ಕೋಚ್ ಆಗಿ ಸೇವೆ ಸಲ್ಲಿಸಿರುವ ರಜಪೂತ್, ಟೀಂ ಇಂಡಿಯಾಗೂ ಮಾರ್ಗದರ್ಶನ ನೀಡಿದ್ದಾರೆ. ಆರಂಭಿಕರಾಗಿದ್ದ ರಜಪೂತ್ ಟೀಂ ಇಂಡಿಯಾ ಪರ 2 ಟೆಸ್ಟ್ ಹಾಗೂ 4 ಏಕದಿನ ಪಂದ್ಯ ಆಡಿದ್ದಾರೆ. ಇನ್ನು 110 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ. (ಎಂ.ಎನ್)

Leave a Reply

comments

Related Articles

error: