
Uncategorized
ಕನ್ನಡ ಪುಸ್ತಕ ಮುದ್ರಣ ಸೊಗಸು-2017 ಬಹುಮಾನ: ಅರ್ಜಿ ಆಹ್ವಾನ
ಮಂಡ್ಯ (ಆ.24): ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ 2017 ರಿಂದ ಡಿಸೆಂಬರ್ 2017ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ ಗುಣಮಟ್ಟವನ್ನು ಪರಿಗಣಿಸಿ ಮುದ್ರಕರಿಗೆ ಕನ್ನಡ ಪುಸ್ತಕ ಮುದ್ರಣ ಸೊಗಸು-2017 ಬಹುಮಾನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿಗಳನ್ನು ಅಗತ್ಯ ವಿವರಗಳೊಂದಿಗೆ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನ.
ಹೆಚ್ಚಿನ ಮಾಹಿತಿಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು, ದೂರವಾಣಿ ಸಂಖ್ಯೆ: 080-22484516/22107704 ಅನ್ನು ಸಂಪರ್ಕಿಸಬಹುದು.(ಎನ್.ಬಿ)