
ದೇಶಪ್ರಮುಖ ಸುದ್ದಿ
ಲಾಲು ಜಾಮೀನು ವಿಸ್ತಣೆಗೆ ನಿರಾಕರಣೆ : ಆರ್.ಜೆ.ಡಿ ನಾಯಕನಿಗೆ ಮತ್ತೆ ಜೈಲೈ ಗತಿ?
ಹೊಸದಿಲ್ಲಿ (ಆ.24): ಜಾಮೀನು ಅವಧಿಯನ್ನು ಮತ್ತೆ 3 ತಿಂಗಳವರೆಗೆ ವಿಸ್ತರಿಸುವಂತೆ ಆರ್ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಮತ್ತು ಆಗಷ್ಟ್ ಆಗಸ್ಟ್ 30ರೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಿದೆ.
ವೈದ್ಯಕೀಯ ನೆಲೆಯಲ್ಲಿ ತಮ್ಮ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಲಾಲು ಅರ್ಜಿ ಸಲ್ಲಿಸಿದ್ದರು. ಜಾರ್ಖಂಡ್ ಹೈಕೋರ್ಟ್ ಈ ಹಿಂದೆ (ಆಗಸ್ಟ್ 10) ಲಾಲು ಜಾಮೀನನ್ನು ಆಗಸ್ಟ್ 20 ರ ತನಕ ವಿಸ್ತರಿಸಿತ್ತು. ಮೇವು ಹಗರಣದಲ್ಲಿ ಆರೋಪಿಯಾಗಿ ಜೈಲು ಶಿಕ್ಷೆಗೊಳಗಾಗಿರುವ ಲಾಲುು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದು ಮುಂಬೈನ ಏಷಿಯಾನ್ ಹಾರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೈಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಲಾಲು ಪರ ವಕೀಲ ಪ್ರಭಾತ್ ಕುಮಾರ್, ಸದ್ಯ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋರ್ಟ್ ಶರಣಾಗುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾಂಚಿಯ ರಾಜೇಂದ್ರ ವೈದ್ಯಕೀಯ ಕಾಲೇಜಿನಲ್ಲಿ ಅವರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗುವುದು ಎಂದಿದ್ದಾರೆ. (ಎನ್.ಬಿ)