ಕ್ರೀಡೆಮೈಸೂರು

ಕೆಪಿಎಲ್ ಮೈಸೂರು ಹಂತಕ್ಕೆ ಚಾಲನೆ ನೀಡಿದ ದೊಡ್ಡ ಗಣೇಶ್ : ಇಂದಿನಿಂದ ಪಂದ್ಯ ಮೈಸೂರಿನಲ್ಲಿ

ಮೈಸೂರು, ಆಗಸ್ಟ್ 25:- ಹುಬ್ಬಳ್ಳಿಯಲ್ಲಿ ಸತತ ಮಳೆಯಿಂದ ಪಂದ್ಯಗಳಿಗೆ ಅಡ್ಡಿಯಾಗುತ್ತಿರುವ ಕಾರಣ, ಲಕ್ಷ್ಮೀವಿಲಾಸ್ ಬ್ಯಾಂಕ್ ಚಾಲಿತ ಕಾರ್ಬನ್ ಸ್ಮಾರ್ಟ್‍ಫೋನ್ಸ್ ಕರ್ನಾಟಕ ಪ್ರೀಮಿಯರ್ ಲೀಗ್‍ನ ಮುಂದಿನ ಎಲ್ಲಾ  ಪಂದ್ಯಗಳು ನಮ್ಮ ಮೈಸೂರಿನಲ್ಲಿ ನಡೆಯಲಿವೆ

“ಸತತ ಅನಾನುಕೂಲದ ವಾತಾವರಣ ಮತ್ತು ಮೈದಾನ ಒದ್ದೆಯಾಗಿರುವ ಕಾರಣ ಕೆಪಿಎಲ್‍ನ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ಮೈಸೂರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸುವಂತಹ ನಿರ್ಣಯವನ್ನು ಕೆಎಸ್‍ಸಿಎ ತೆಗೆದುಕೊಂಡಿದೆ’’ ಎಂದು ಕೆಎಸ್‍ಸಿಎನ ಅಧಿಕೃತ ವಕ್ತಾರರಾದ ವಿನಯ್ ಮೃತ್ಯುಂಜಯ ಹೇಳಿದರು. ನಿನ್ನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ನಮ್ಮ ಪಾಲುದಾರರಾದ ಸ್ಟಾರ್ ಸ್ಪೋರ್ಟ್ಸ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿರುವ ಆಸಕ್ತಿಯಿಂದಾಗಿ ಈ ಸುಂದರ ನಗರದಲ್ಲಿ ಈ ಉತ್ಸಾಹಕರ ಟೂರ್ನಿ ಮುಂದುವರಿಸುವುದನ್ನು ನಾವು ಎದುರುನೋಡುತ್ತಿದ್ಧೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಭಾರತೀಯ ಕ್ರಿಕೆಟಿಗ ದೊಡ್ಡ ಗಣೇಶ್, ಕೆಪಿಎಲ್‍ನ ಬ್ರಾಂಡ್ ರಾಯಭಾರಿ ರಾಗಿಣಿ ದ್ವಿವೇದಿ, ಕೆಎಸ್‍ಸಿಎನ ಅಧಿಕೃತ ವಕ್ತಾರರಾದ ವಿನಯ್ ಮೃತ್ಯುಂಜಯ, ಕೆಎಸ್‍ಸಿಎ ಮೈಸೂರು ಪ್ರಾದೇಶಿಕ ಚೇರ್ಮನ್ ಸುಧಾಕರ್ ರೈ ಮತ್ತು ಕೆಎಸ್‍ಸಿಎ ಮೈಸೂರು ಪ್ರಾದೇಶಿಕ ಸಂಚಾಲಕರು ಮತ್ತು ನಿರ್ವಹಣಾ ಸಮಿತಿ ಸದಸ್ಯರಾದ ಬಾಲಚಂದರ್ ಹಾಜರಿದ್ದರು.

“ಕೆಪಿಎಲ್ ಕಳೆದ ವರ್ಷಗಳಲ್ಲಿ ಬೆಳೆದಿರುವ ರೀತಿಯನ್ನು ನೋಡುವುದು ನನಗೆ ನಿಜಕ್ಕೂ ಹರ್ಷದ ವಿಷಯವಾಗಿದೆ. ಯಾವುದೇ ಶಂಕೆಯಿಲ್ಲದೆ ಅದು ಆಟಗಾರರು ಅರಳಲು ಬೃಹತ್ ವೇದಿಕೆಯನ್ನು ಪೂರೈಸಿದೆ ಎಂದು ದೊಡ್ಡ ಗಣೇಶ್ ತಿಳಿಸಿದರು. ನಾನು ಆಟವಾಡುವ ದಿನಗಳಲ್ಲಿ ಈ ರೀತಿಯ ವೇದಿಕೆ ಇರಬೇಕಿತ್ತು ಎಂದರಲ್ಲದೇ, ತಮಗೆ ಪೂರೈಸಲಾದ ಅವಕಾಶವನ್ನು ಆಟಗಾರರು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಟೂರ್ನಿಯ ಭಾಗವಾಗಿರುವ ಪ್ರತಿಯೊಬ್ಬರೂ ತಮ್ಮ ಮೆಚ್ಚಿನ ನೆನಪುಗಳೊಂದಿಗೆ ಹಿಂತಿರುಗುತ್ತಾರೆ ಎಂಬ ಭರವಸೆ ನನಗಿದೆ ಎಂದರು.

ಕೆಎಸ್‍ಸಿಎಯನ್ನು ಮೈಸೂರಿನಲ್ಲಿ ಪ್ರತಿನಿಧಿಸಿದ್ದ ಬಾಲಚಂದರ್ ಮಾತನಾಡಿ, “ಕರ್ನಾಟಕ ಪ್ರೀಮಿಯರ್ ಲೀಗ್ ಈಗ ತನ್ನ 7ನೇ ಋತುವಿನಲ್ಲಿದ್ದು, ನಾವು ಇದಕ್ಕಿಂತಲೂ ಹೆಚ್ಚು ಸಂತಸದಿಂದಿರಲು ಸಾಧ್ಯವಿಲ್ಲ. ಈ ಋತುವಿಗಾಗಿ ಹೆಚ್ಚುವರಿ ಪಂದ್ಯಗಳಿಗೆ ಆತಿಥ್ಯ ವಹಿಸಲು ನಮ್ಮನ್ನು ಸಂಪರ್ಕಿಸಿದಾಗ, ಅದಕ್ಕೆ ಒಪ್ಪಿಗೆ ನೀಡುವಲ್ಲಿ ನಾವು ಯಾವುದೇ ಹಿಂದೇಟು ಹಾಕಲಿಲ್ಲ. ಮೈಸೂರಿನಲ್ಲಿ ಟೂರ್ನಿಯ 3ನೇ ಹಂತಕ್ಕೆ ನಾವು ಆತಿಥ್ಯ ವಹಿಸಲಿದ್ದು ಇದಕ್ಕಾಗಿ ಎಸ್‍ಡಿಎನ್‍ಆರ್ ಒಡೆಯರ್ ಕ್ರೀಡಾಂಗಣ ಸಂಪೂರ್ಣವಾಗಿ ಸಜ್ಜಾಗಿದೆ. ಮೈಸೂರಿನ ಜನರು ದೊಡ್ಡಸಂಖ್ಯೆಯಲ್ಲಿ ಬಂದು ಎಲ್ಲಾ ತಂಡಗಳನ್ನು ಬೆಂಬಲಿಸುವವರು ಎಂಬ ಭರವಸೆ ನಮಗಿದೆ ಎಂದರು.

ಇಂದು ನಡೆಯುವ ಪಂದ್ಯಗಳು

ಬೆಳಗಾವಿ ಪ್ಯಾಂಥರ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ನಡುವೆ   ಮಧ್ಯಾಹ್ನ 2ಕ್ಕೆ,

ಶಿವಮೊಗ್ಗ ಲಯನ್ಸ್ ಮತ್ತು ಬೆಂಗಳೂರು ಬ್ಲ್ಯಾಸ್ಟರ್ಸ್ ನಡುವೆ ಸಂಜೆ 6.40 ಕ್ಕೆ

ಸ್ಥಳ : ಕೆಎಸ್‍ಸಿಎ ಎಸ್‍ಡಿಎನ್‍ಆರ್ ಒಡೆಯರ್ ಸ್ಟೇಡಿಯಂ, ಮೈಸೂರು.

ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್  ಸ್ಪೋರ್ಟ್ಸ್ 2 ಎಚ್‍ಡಿ ಮತ್ತು ಹಾಟ್‍ಸ್ಟಾರ್‍ಗಳಲ್ಲಿ ನೇರ ಪ್ರಸಾರ

ಟಿಕೆಟ್‍ಗಳು ಮೈಸೂರಿನ ಕೆಎಸ್‍ಸಿಎ ಕ್ರೀಡಾಂಗಣದ ಬಾಕ್ಸ್ ಆಫೀಸ್‍ನಲ್ಲಿ ಲಭ್ಯವಿರುತ್ತವೆ. ಇವುಗಳ ಬೆಲೆ ರೂ. 50, 80, 100, 150 ಮತ್ತು 300 ರೂ.ಗಳಾಗಿರುತ್ತವೆ.

ಟಿಕೆಟ್‍ಗಳು ಆನ್‍ಲೈನ್‍ನಲ್ಲಿ ಕೂಡ ಪೇಟಿಯಂ ಮತ್ತು ಇನ್‍ಸೈಡರ್‍ಡಾಟ್‍ಇನ್ (insider.in)ಗಳಲ್ಲಿ ಲಭ್ಯ. ಆನ್‍ಲೈನ್‍ನಲ್ಲಿ ಖರೀದಿಸಿದ ಎಲ್ಲಾ ಟಿಕೆಟ್‍ಗಳಿಗೆ ಶೇ.50ರಷ್ಟು ಕ್ಯಾಷ್‍ಬ್ಯಾಕ್ ಸೌಲಭ್ಯವನ್ನು ಪೇಟಿಯಂ ನೀಡುತ್ತಿದೆ. ಹೆಚ್ಚುವರಿ ಲಾಭಕ್ಕಾಗಿ ಅಭಿಮಾನಿಗಳು ಕೋಡ್ ಕೆಪಿಎಲ್ ಬಳಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆ.ಎಸ್,ಸಿಎ    ಮೊಬೈಲ್  9844059360ನ್ನು ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: