ಪ್ರಮುಖ ಸುದ್ದಿ

ಮಡಿಕೇರಿ : ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿದ ನಾಲ್ವರು ಅಧಿಕಾರಿಗಳು ಅಮಾನತು

ರಾಜ್ಯ(ಕೊಡಗು)ಆ.25:- ಕೊಡಗು ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಗೆ ಮಡಿಕೇರಿ ನಗರದ ಸುತ್ತಮುತ್ತ ಹಾಗೂ ಜಿಲ್ಲೆಯ ಹಲವೆಡೆ ಜಲಾವೃತ ಮತ್ತು ಭೂಕುಸಿತದಿಂದ ಜೀವಹಾನಿ, ಮನೆಹಾನಿ, ರಸ್ತೆ ಹಾನಿ ಸೇರಿದಂತೆ ಹಲವು ನಷ್ಟಗಳು ಸಂಭವಿಸಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಪರಿಹಾರ ಪುನರ್ವತಿ , ಮೂಲಸೌಕರ್ಯ ವ್ಯವಸ್ಥೆ, ಪುನರ್ ನಿರ್ಮಾಣ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ನಾಲ್ವರನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುತ್ತಿರುವ ಸಭೆಗಳಿಗೆ ಮತ್ತು ಹಾನಿಗೀಡಾದ ಪ್ರದೇಶಗಳಿಗೆ ಆಗಮಿಸುವಂತೆ ಹಲವು ಬಾರಿ ಸೂಚನೆಗಳನ್ನು ನೀಡಿದ್ದರೂ ಕೂಡ ನಿರ್ಲಕ್ಷ್ಯಿಸಿದವರನ್ನು ಗಂಭೀರವಾಗಿ ಪರಿಗಣಿಸಿ ಕೆ.ಆರ್.ಐ.ಡಿ.ಎಲ್ ಮಡಿಕೇರಿಯ (ಹುಣಸೂರು ವಿಭಾಗ)ಕಾರ್ಯಪಾಲಕ ಅಭಿಯಂತರರಾದ ಪಾಂಡುರಂಗ, ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್, ಸಹಾಯಕ ಇಂಜಿನಿಯರ್ ಪ್ರಮೋದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: