ಮೈಸೂರು

ಕೃಷಿಗೆ ಪ್ರಾಧಾನ್ಯತೆ ನೀಡದಿರುವುದು ಬೇಸರದ ವಿಚಾರ: ಎಚ್.ಪಿ. ಬತ್ರಾ

ಕೃಷಿ ಕ್ಷೇತ್ರವನ್ನು ಎಲ್ಲರೂ ಕಡೆಗಣಿಸುತ್ತಿದ್ದಾರೆ. ಕೃಷಿಗೆ ಎಲ್ಲರ ಸಹಕಾರ ಬೇಕಾಗಿದ್ದು, ನಮ್ಮ ದೇಶ ಶೇ.70 ರಷ್ಟು ಕೃಷಿಯಿಂದ ಕೂಡಿದ್ದು, ಕೃಷಿ ನಮ್ಮ ದೇಶದ ಬೆನ್ನೆಲುಬಾಗಿದೆ. ಆದರೆ ಬೇರೆ ವರ್ಗಕ್ಕೆ ಇರುವ ಆದ್ಯತೆ, ಗಮನವನ್ನು ಕೃಷಿಗೆ ನೀಡದಿರುವುದು ಬೇಸರದ ಸಂಗತಿ ಎಂದು ಡಿ.ಎಫ್.ಆರ್.ಎಲ್. ಮಾಜಿ ನಿರ್ದೇಶಕರಾದ ಎಚ್.ಪಿ. ಬತ್ರಾ ಹೇಳಿದರು.

ಆಹಾರ ಸಂಸ್ಕರಣ ಉದ್ದಿಮೆಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೃಷಿಯೂ ಶೇ.2.5 ರಷ್ಟು ಜಿಡಿಪಿ ಹೊಂದಿದೆ. ಆದರೆ ಇದೀಗ ದೇಶದ ಜಿಡಿಪಿ ಶೇ.7ರಷ್ಟು ಮೀರಿದೆ. ಮುಂದೆ ಇದೇ ಜಿಡಿಪಿ ಶೇ.10 ರಷ್ಟು ಆದರೂ ಕೃಷಿಯೂ ಇಷ್ಟೇ ಪ್ರಮಾಣದಲ್ಲಿರುತ್ತೆ. ಇದಕ್ಕೆ ಕಾರಣ ಕೃಷಿಯನ್ನು ಕಡೆಗಣಿಸಿರುವುದು ಎಂದರು.

ಈಗಲೇ ಆಹಾರಗಳು ಹಾಗೂ ಅದಕ್ಕೆ ಬಳಸುವ ಹಣ ಶೇ.40ರಷ್ಟು ಪ್ರಮಾಣದಲ್ಲಿ ವ್ಯರ್ಥವಾಗುತ್ತಿದೆ. ಶೇ.2ರಷ್ಟು ಮಾತ್ರ ಇದರ ಸದ್ಬಳಕೆ ಆಗುತ್ತಿದ್ದು, ದೇಶದ ಅಪೌಷ್ಟಿಕತೆಗೂ ಕಾರಣವಾಗುತ್ತಿದೆ. ದೇಶದಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದೆ. ಪೌಷ್ಟಿಕತೆಯ ಪ್ರಮಾಣ ಕುಸಿದು ಭಾರತದಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಭಾರತದ ಯುವ ಜನಾಂಗ ಸರ್ಕಾರಿ ಕೆಲಸಕ್ಕೆ ಕಾಯದೆ ಸ್ವಉದ್ಯೋಗ ಕೈಗೊಳ್ಳಬೇಕು. ಇದರಿಂದ ದೇಶದ ಪ್ರಗತಿ ಸಾಧ್ಯ. ಜೊತೆಯಲ್ಲಿ ಕೃಷಿಗೂ ಆದ್ಯತೆ ಕೊಡಬೇಕು ಎಂದರು.

ಕೈಗಾರಿಕಾ ಹಾಗೂ ವಾಣಿಜ್ಯ  ಜಂಟಿ ನಿರ್ದೇಶಕರಾದ ರಾಮಕೃಷ್ಣೇಗೌಡ ಹಾಗೂ ಆಡಳಿತ ನಿರ್ದೇಶಕ ರಾದ ಎಂ.ಜೆ. ಬೈಂದೂರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: