ಮೈಸೂರು

ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣು

ಮೈಸೂರು,ಆ.25:- ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉದಯಗಿರಿಯ ಶಾಂತಿನಗರದಲ್ಲಿ ನಡೆದಿದೆ.

ಮೃತರನ್ನು ಶಾಯಿದಾ ಬಾನು (23)ಎಂದು ಗುರುತಿಸಲಾಗಿದ್ದು, ಗಂಡ,ಅತ್ತೆ ಹಾಗೂ ಅತ್ತೆಯ ತಂಗಿ ಮೇಲೆ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ.  ಶಾಯಿದಾ ಬಾನು ಒಂದೂವರೆ ವರ್ಷದ ಹಿಂದೆ ಕಾರ್ ಡ್ರೈವರ್ ಮಹಮದ್ ಸಲ್ಮಾನ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಮಹಮದ್ ಸಲ್ಮಾನ್ ಮದುವೆ ನಂತರ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದು, ಗಂಡ, ಅತ್ತೆ ಹಾಗೂ ಚಿಕ್ಕ ಅತ್ತೆ ಕಿರುಕುಳ ತಾಳದೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: