ಕರ್ನಾಟಕ

ಉಸಿರಾಟದ ತೊಂದರೆಯಿಂದ ವ್ಯಕ್ತಿ ಸಾವು

ರಾಜ್ಯ(ಮಡಿಕೇರಿ)ಆ.25:- ಸೋಮವಾರಪೇಟೆಯ ಐಗೂರು ಪರಿಹಾರ ಕೇಂದ್ರದಲ್ಲಿದ್ದ  ಸಂತ್ರಸ್ತರೋರ್ವರು ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಕಿರಗಂದೂರು ಕೆಳಗಳಲೆಯ ಟಾಟಾ ಎಸ್ಟೇಟ್‍ನ ಲೈನ್‍ಮನೆಯಲ್ಲಿ ವಾಸವಾಗಿದ್ದ ಬಾಬು(62) ಮೃತಪಟ್ಟವರು. ಪರಿಹಾರ ಕೇಂದ್ರದಲ್ಲಿದ್ದ ಸಂದರ್ಭ ಉಸಿರಾಟದ ತೊಂದರೆಯಾಗಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: