ಕರ್ನಾಟಕ

ತ್ಯಾಜ್ಯ ಸಾಗಿಸುತ್ತಿದ್ದ ಕ್ಯಾಂಟರ್ ಬೆಂಕಿಗಾಹುತಿ

ರಾಜ್ಯ(ಬೆಂಗಳೂರು)ಆ.25:- ತ್ಯಾಜ್ಯ ಮತ್ತು ರಸಾಯನಿಕ ವಸ್ತುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಹೊತ್ತಿ ಉರಿದ ಘಟನೆ ಬನ್ನೇರುಘಟ್ಟ ಸಮೀಪದ ಕೆಂಪನಾಯಕನಹಳ್ಳಿ ಬಳಿ ನಡೆದಿದೆ.

ಜಿಗಣಿಯ ಕೈಗಾರಿಕಾ ಪ್ರದೇಶದ ಹೈಕಲ್ ಕಂಪೆನಿಯಿಂದ ಬೆಂಗಳೂರಿನ ಕಡೆ ಕ್ಯಾಂಟರ್ ಹೊರಟಿತ್ತು. ದಾರಿಯ ಮಧ್ಯದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಕ್ಯಾಂಟರ್‍ನ ಹಿಂಬದಿಯ ಭಾಗ ಸಂಪೂರ್ಣ ಸುಟ್ಟುಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದಾರೆ.ಕ್ಯಾಂಟರ್‌ನಲ್ಲಿ ತ್ಯಾಜ್ಯ ಮತ್ತು ರಾಸಾಯನಿಕ ವಸ್ತುಗಳನ್ನು ಸಾಗಿಸಲಾಗುತ್ತಿದ್ದು ಶಾಖಕ್ಕೆ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆಎಸ್,ಎಸ್.ಎಚ್)

Leave a Reply

comments

Related Articles

error: