ಮನರಂಜನೆ

ನಟಿ ನೇಹಾ ಧೂಪಿಯಾ ಗರ್ಭೀಣಿ: ಬೇಬಿ ಬಂಪ್ ಫೋಟೋ ಶೇರ್ ಮಾಡಿದ ದಂಪತಿ

ಮುಂಬೈ,ಆ.25-ನಟಿ ನೇಹಾ ಧೂಪಿಯಾ ತಾಯಿಯಾಗಿದ್ದು, ನೇಹಾ ಹಾಗೂ ಪತಿ ಅಂಗದ್ ಸಿಂಗ್ ಬೇಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಸಂತಸದ ವಿಚಾರವನ್ನು ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ದಂಪತಿಗಳು ಒಟ್ಟಿಗೆ ಇರುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರು ಪೋಸ್ಟ್ ಮಾಡಿದ್ದು, ಈ ಫೋಟೋದಲ್ಲಿ ಬೇಬಿ ಬಂಪ್ ಸಹ ಕಾಣಿಸುತ್ತಿದೆ. ಫೋಟೋಗೆ ‘ಇನ್ಮುಂದೆ ನಾವು ಮೂರು ಜನ’ ಎಂದು ಅಡಿಬರಹ ನೀಡಿದ್ದಾರೆ.

ಫೋಟೋ ನೋಡಿದ ಅಭಿಮಾನಿಗಳು ಅಂಗದ್ ಬೇಡಿ ಮತ್ತು ನೇಹಾ ಧೂಪಿಯಾಗೆ ಶುಭಕೋರಿದ್ದಾರೆ. ಇನ್ನು ಕೆಲವರು ಮದುವೆ ಆಗಿ ಬರಿ ಮೂರು ತಿಂಗಳಾಗಿದೆ. ಹಾಗಿದ್ದರೇ, ಮದುವೆಗೂ ಮುಂಚೆಯೇ ನೇಹಾ ಗರ್ಭಿಣಿಯಾಗಿರಬೇಕು ಎಂದು ಕಾಲೆಳೆಯುತ್ತಿದ್ದಾರೆ.

ನೇಹಾ ಧೂಪಿಯಾ ಮತ್ತು ಅಂಗದ್ ಸಿಂಗ್ ಬೇಡಿ ಸದ್ದಿಲ್ಲದೇ ಮೇ 10 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದರಿಂದ ನೇಹಾ ಮದುವೆಗೂ ಮುಂಚೆಯೇ ಗರ್ಭೀಣಿಯಾಗಿದ್ದರು. ಹೀಗಾಗಿ ಅವಸರವಾಗಿ, ಸರಳವಾಗಿ ವಿವಾಹ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಬಗ್ಗೆ ಈ ಜೋಡಿ ಸ್ಪಷ್ಟನೆ ನೀಡರಲಿಲ್ಲ.

ಮದುವೆಗೂ ಮುನ್ನವೇ ನೇಹಾ ಧೂಪಿಯಾ ಗರ್ಭಿಣಿ ಆಗಿದ್ದರು ಅನ್ನೋದು ಶುದ್ಧ ಸುಳ್ಳು ಸುದ್ದಿ. ಆ ತರಹ ಏನೂ ಇರಲಿಲ್ಲ. ಇದ್ದಕ್ಕಿದ್ದಂತೆ ಇಬ್ಬರೂ ಮದುವೆ ಆಗಿದ್ರಿಂದ, ಈ ತರಹ ಗಾಳಿಮಾತು ಕೇಳಿಬರುತ್ತಿದೆ ಅಷ್ಟೇ. ಕೆಲವರು ತಮಗೆ ಇಷ್ಟಬಂದಂತೆ ರೂಮರ್ಸ್ ಹಬ್ಬಿಸುತ್ತಿರುತ್ತಾರೆ ಎಂದು ದಿನಪತ್ರಿಕೆಯೊಂದಕ್ಕೆ ನೇಹಾ ಧೂಪಿಯಾ ತಂದೆ ಪ್ರದೀಪ್ ಧೂಪಿಯಾ ಸ್ಪಷ್ಟನೆ ಕೊಟ್ಟಿದ್ದರು. (ಎಂ.ಎನ್)

Leave a Reply

comments

Related Articles

error: