ಕರ್ನಾಟಕ

ಸೆಪ್ಟೆಂಬರ್ 5 ರಂದು ರಾಜ ಭವನ ಚಲೋ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ

ರಾಜ್ಯ( ಬೆಂಗಳೂರು)ಆ.25:- ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಅಂಗವಾಗಿ ಸೆಪ್ಟೆಂಬರ್ 5 ರಂದು ರಾಜ ಭವನ ಚಲೋ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶವನ್ನು ನಡೆಸಲು ಗೌರಿ ಲಂಕೇಶ್ ಬಳಗ ನಿರ್ಧರಿಸಿದೆ.

ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಉದ್ಘಾಟನೆ ಆಗಸ್ಟ್ 30 ರಂದು ಧಾರಾವಾಡದಲ್ಲಿ ಕಲ್ಬುರ್ಗಿ ದಿನದ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಗುವುದು. ಸೆಪ್ಟೆಂಬರ್ 5ಕ್ಕೆ ಗೌರಿ ಲಂಕೇಶ್ ಅವರನ್ನು ಕಳೆದುಕೊಂಡು ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಗೌರಿ ದಿನದ ಭಾಗವಾಗಿ ಬೆಳಿಗ್ಗೆ 8 ಗಂಟೆಗೆ ಗೌರಿ ಲಂಕೇಶ್ ಸಮಾಧಿ ಬಳಿ ಶ್ರದ್ದಾಂಜಲಿ ಅರ್ಪಿಸಲಾಗುವುದು. ನಂತರ ಬೆಳಿಗ್ಗೆ 10.30ಕ್ಕೆ ಮೌರ್ಯ ವೃತ್ತದಿಂದ ರಾಜ ಭವನ ಚಲೋ ಭಾಗವಾಗಿ ಪ್ರತಿರೋಧ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಮುಖ್ಯಸ್ಥ ಡಾ.ಎಚ್.ಎಸ್.ದೊರೆಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.30ಕ್ಕೆ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ ಮತ್ತು ಸಾಂಸ್ಕೃತಿಕ ಪ್ರತಿರೋಧ ನಡೆಯಲಿದೆ.  ಕಾರ್ಯಕ್ರಮದ ಅಂಗವಾಗಿ ಸಪ್ತಾಹ ಉದ್ಘಾಟನೆ ಮರುದಿನ ಧಾರಾವಾಡ ದಿಂದ ಬೆಂಗಳೂರಿಗೆ ವಾಹನ ಸಪ್ತಾಹ ನಡೆಯಲಿದೆ ಎಂದ ಅವರು ಗಾಂಧೀ ಕೊಂದವರು ಗೌರಿ ಕೊಂದಿದ್ದಾರೆ. ಗೌರಿ ಕೊಂದವರು ಕಲ್ಬುರ್ಗಿ ಕೊಂದಿದ್ದಾರೆ. ಹಂತಕರೊಂದಿಗೆ ಹುನ್ನಾರ ರೂಪಿಸಿದವರನ್ನು ಬಂಧಿಸಿ ಕೊಲೆ ಗಡುಕ ಸಂಘಟನೆಯನ್ನು ನಿರ್ಬಂಧಿಸಿ, ಸನಾತನ ಸಂಸ್ಥೆ ನಾಯಕರನ್ನು ಬಂಧಿಸಿ ಇನ್ನು ಮುಂತಾದ ಘೋಷಣೆಗಳನ್ನು ಕೂಗಲಾಗುವುದುದೆಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: