ಮೈಸೂರು

ಶಾಲೆಯ ನೂತನ ಭವನಗಳ ಉದ್ಘಾಟನೆ

ಸೆಮಿನಾರ್ ಹಾಲ್, ಅಡುಗೆ ಮನೆ, ಕಂಪ್ಯೂಟರ್ ರೂಮ್, ಹುಡುಗರ ಶೌಚಾಲಯದ ನೂತನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮವನ್ನು ಗುರುವಾರದಂದು ಆಯೋಜಿಸಲಾಗಿದ್ದು, ಮಾನಸಗಂಗೋತ್ರಿ ಶಾಲೆಯ ಮಕ್ಕಳು ಸುಮಾರು 40 ನಿಮಿಷಗಳ ಕಾಲ ಗಣ್ಯರ ಆಗಮನದ ನಿರೀಕ್ಷೆಯಲ್ಲಿ ಬಿಸಿಲಿನಲ್ಲಿ ಬಳಲಿ ಬೆಂಡಾಗಿ ಹೋದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ 12 ಗಂಟೆಗೆ ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಹಾಜರಾಗಬೇಕಿತ್ತು. ಆದರೆ, ಬೇರೆ ಕಾರ್ಯಕ್ರಮಗಳಿಂದಾಗಿ ಅವರು ತಡವಾಗಿ ಆಗಮಿಸಿದರು.

ಬಳಿಕ ಪ್ರೊ. ರಂಗಪ್ಪ ಅವರು ಮಾತನಾಡಿ, ಯಾವುದೇ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ ಶಾಲೆಯೊಂದು ಇರುವುದು ಒಳ್ಳೆಯದು. ನಮ್ಮ ವಿವಿಯಲ್ಲಿ ಶಾಲೆಯು ಕಳೆದ 5 ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅಸಾಧಾರಣ ಕಾಣಿಕೆಯನ್ನು ನೀಡಿದೆ. ಶಾಲೆಯ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 1 ಕೋಟಿ ರೂ. ಅನ್ನು ದಾನವಾಗಿ ನೀಡಲಾಗಿದೆ ಎಂದು ತಿಳಿಸಿದರು.

ಮಾನಸಗಂಗೋತ್ರಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಪ್ರೊ.ಸಿ. ರಾಮಸ್ವಾಮಿ, ಮೈಸೂರು ವಿವಿ ರಿಜಿಸ್ಟ್ರಾರ್ ಪ್ರೊ. ಆರ್. ರಾಜಣ್ಣ ಮತ್ತು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: