ದೇಶ

ಭೂಕುಸಿತದಿಂದ ಮಕಾಡೆ ಮಲಗಿದ ಬಸ್: ವಿಡಿಯೋ ವೈರಲ್

ನೈನಿಖಡ್,ಆ.25-ಹಿಮಾಚಲ ಪ್ರದೇಶದ ನೈನಿಖೇಡ್ ನಲ್ಲಿ ಇಂದು ಸಂಭವಿಸಿದ ಭೂಕುಸಿತದಲ್ಲಿ ಬಸ್ಸೊಂದು ಸಿಲುಕಿ ಮಕಾಡೆ ಮಲಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಠಾಣ್ ಕೋಟ್ ಮತ್ತು ಡಾಲ್ ಹೌಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ಈ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ಸು ಭೂಕುಸಿತದಿಂದ ಮಕಾಡೆ ಮಲಗಿದೆ.

ಭೂಕುಸಿತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿದ ಕುರಿತು ವರದಿಯಾಗಿಲ್ಲ. ಭೂಕುಸಿತದ ನಂತರ ಈ ಹೆದ್ದಾರದಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಹಿಮಾಚಲಪ್ರದೇಶದಲ್ಲಿ ಆಗಾಗ ಇಂಥ ಭೂಕುಸಿತಗಳು ಸಂಭವಿಸುತ್ತಲೇ ಇರುತ್ತವೆ. ಬೃಹತ್ ಭೂಕುಸಿತ ಸಂಭವಿಸಿದರೆ ಎಷ್ಟೊ ದಿನಗಳವರೆಗೆ ರಸ್ತೆ ಮುಚ್ಚಲ್ಪಟ್ಟು ಒಂದೆಡೆಯಿಂದ ಇನ್ನೊಂದೆಡೆಗೆ ತೆರಳಲು ಬೇರೆ ದಾರಿಯೇ ಇಲ್ಲದಂತಾಗುತ್ತದೆ. (ಎಂ.ಎನ್)

Leave a Reply

comments

Related Articles

error: