ಮನರಂಜನೆ

‘ಹೆಲಿಕಾಪ್ಟರ್ ಈಲಾ’ ಚಿತ್ರ ನಿರ್ದೇಶಕನಿಗೆ ಡೆಂಗ್ಯೂ : ಚಿತ್ರ ಅಕ್ಟೋಬರ್ ನಲ್ಲಿ ತೆರೆಗೆ

ದೇಶ(ನವದೆಹಲಿ)ಆ.25:- ಬಾಲಿವುಡ್ ನಟಿ ಕಾಜೋಲ್ ಅಭಿನಯದ ‘ಹೆಲಿಕಾಪ್ಟರ್ ಈಲಾ’ ಚಿತ್ರದ ನಿರ್ದೇಶಕ ಪ್ರದೀಪ್ ಸರ್ಕಾರ್ ಗೆ ಡೆಂಗ್ಯೂ ಆದ ಕಾರಣ ಚಿತ್ರ ಅಕ್ಟೋಬರ್ ನಲ್ಲಿ ತೆರೆ ಕಾಣಲಿದೆ.

ನಿರ್ದೇಶಕ ಪ್ರದೀಪ್ ಸರ್ಕಾರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಚಿತ್ರ ಸೆಪ್ಟೆಂಬರ್ 7ರಂದು ತೆರೆಕಾಣಲಿದೆ ಎಂದು ಹೇಳಲಾಗಿತ್ತು. ಡೆಂಗ್ಯೂವಿನಿಂದ ಬಳಲುತ್ತಿದ್ದರೂ ಕೂಡ ಅವರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಅವರಿಗಾಗಿ ಒಂದು ಆ್ಯಂಬುಲೆನ್ಸ್ ಮತ್ತು ಓರ್ವ ಡಾಕ್ಟರ್ ಕೂಡ ಸ್ಥಳದಲ್ಲಿಯೇ ಇದ್ದವಂತೆ. ಚಿತ್ರೀಕರಣ ಪೂರ್ಣವಾಗುತ್ತಿದ್ದಂತೆಯೇ ಅವರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿತ್ರ ನಿರ್ಮಾಪಕ ನಟ ಅಜಯ್ ದೇವಗನ್ ಚಿತ್ರವನ್ನು ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳಿಸುವುದಿಲ್ಲ ಎನ್ನಲಾಗಿದ್ದು, ಅಕ್ಟೋಬರ್ 12ರಂದು ತೆರೆಕಾಣಲಿದ್ದು, ಚಿತ್ರದಲ್ಲಿ ಕಾಜೋಲ್ ಉದಯೋನ್ಮುಖ ಗಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ (ಎಸ್.ಎಚ್)

Leave a Reply

comments

Related Articles

error: