ಕರ್ನಾಟಕಪ್ರಮುಖ ಸುದ್ದಿ

ನಿರ್ಮಲಾ ಸೀತಾರಾಮನ್ ವರ್ತನೆ ಸರಿಯಲ್ಲ: ಸಚಿವ ಎನ್.ಮಹೇಶ್

ಬೆಂಗಳೂರು (ಆ.25): ಕೊಡಗಿಗೆ ಸಂಕಷ್ಟ ಒದಗಿರುವ ಸಮಯದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾಳ್ಮೆಯಿದಲ್ಲದ ವರ್ತನೆ ತೋರಿರುವುದು ಸರಿಯಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅವರು ನಗದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಓರ್ವ ಕೇಂದ್ರ ಸಚಿವರಾಗಿ ಇನ್ನೊಬ್ಬ ಕೇಂದ್ರ ಸಚಿವರಿಗೆ ಈ ರೀತಿ ಮಾಡಬಾರದು. ಕೇಂದ್ರ ಸಚಿವರ ಬಗ್ಗೆ ನಮಗೆ ಅಪಾರ ಗೌರವ ಇದೆ. ಆದರೆ ಅವರ ವರ್ತನೆ ಸರಿಯಲ್ಲ ಜೊತೆಗೆ ಕೊಡಗು ವಿಚಾರದಲ್ಲಿ ಕೇಂದ್ರದ ಸ್ಪಂದನೆ ಸ್ವಲ್ಪವೂ ಸರಿಯಿಲ್ಲ. 3 ಸಾವಿರ ಕೋಟಿ ನಷ್ಟ ಉಂಟಾಗಿರುವ ಕಡೆ ಕೇವಲ 8 ಕೋಟಿ ಕೊಟ್ಟರೆ ಹೇಗೆ? ಕೊಡಗಿನಲ್ಲಿ ನಷ್ಟ ಉಂಟಾಗಿರುವ ಶಾಲೆಗಳ ದುರಸ್ಥಿಗೇ 4 ಕೋಟಿಗೂ ಹೆಚ್ಚು ಹಣ ಬೇಕು ಎಂದರು.

ನನ್ನ ಒಂದು ತಿಂಗಳ ವೇತನ ಹಾಗು ನಮ್ಮ ಇಲಾಖೆಯ ಸಿಬ್ಬಂದಿಯ ಒಂದು ದನದ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದೇವೆ. ಮುಖ್ಯಮಂತ್ರಿಗಳ ಪರಿಹಾರ‌ ನಿಧಿಯಲ್ಲಿ ಶಾಲೆಗಳ ದುರಸ್ಥಿಗೆ 4 ಕೋಟಿ ಕೇಳಿದ್ದೇವೆ. ಅಲ್ಲಿನ ಸ್ಥಿತಿ ನೋಡಿದರೆ ಬಹಳ ನೋವಾಗತ್ತದೆ. ಇಂಥ ಸಂದರ್ಭದಲ್ಲಿ ಕೇಂದ್ರ ಕೇವಲ 8 ಕೋಟಿ ಹಣ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು. (ಎನ್.ಬಿ)

Leave a Reply

comments

Related Articles

error: