ಮೈಸೂರು

ರನ್ ಫಾರ್ ಆ್ಯಂಟಿ ಕರಪ್ಶನ್: ಮ್ಯಾರಥಾನ್ ಹಾಗೂ ವಾಕಥಾನ್: ಡಿ.25ರಂದು

ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಸಾರ್ವಜನಿಕರಿಗೆ ತಿಳುವಳಿಕೆಯಂಗವಾಗಿ ಜಯಪ್ರಕಾಶ್ ನಗರದ ರೋಟರಿ ಕ್ಲಬ್ ಹಾಗೂ ಜಾಯಿನ್ ಟು ಹೆಲ್ಪ್ ಸಂಸ್ಥೆಯ ಸಹಯೋಗದಲ್ಲಿ ‘ರನ್ ಫಾರ್ ಆ್ಯಂಟಿ ಕರಪ್ಶನ್’ ಮ್ಯಾರಾಥಾನ್ ಹಾಗೂ ವಾಕಥಾನ್’ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾಯಿನ್ ಟು ಹೆಲ್ಪ್ ಸಂಸ್ಥೆ ಅಧ್ಯಕ್ಷ ಧನುಷ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅವರು ಪತ್ರಕರ್ತರ ಭವನದಲ್ಲಿ ಮಾತನಾಡಿ, ಡಿ.25ರ ಭಾನುವಾರ ಬೆಳಗ್ಗೆ 6.30ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಓಟವು ಆರಂಭವಾಗಲಿದ್ದು ಮುಖ್ಯ ಅತಿಥಿಗಳಾಗಿ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಮೋದಾ ದೇವಿ ಒಡೆಯರ್, ಅನಂತರಾಜ್ ಅರಸ್, ವಿ.ಸಿ.ಚೆಲುವಯ್ಯ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ರೋಟರಿಯ ಯಶಸ್ವಿ ಸೋಮಶೇಖರ್ ಮತ್ತು ಸಮಾಜಸೇವಕ ರಾಜರಾಮ್ ಆಗಮಿಸುವರು.

5 ಕಿಮೀವರೆಗೂ ಓಟ ಹಾಗೂ 2.5 ಕೀ.ಮೀವರೆಗೂ ಬಿರುಸು ನಡಿಗೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಚಳುವಳಿಯಲ್ಲಿ ಕೈಜೋಡಿಸಿರುವ ಸಂಘ ಸಂಸ್ಥೆಗಳ ಬ್ಯಾನರ್‍ಗಳನ್ನು ಹಿಡಿದು ಸ್ವಯಂ ಸೇವಕರು ನಡೆಯುವರು. 50 ರೂಪಾಯಿ ಪ್ರವೇಶ ದರ ನಿಗದಿಪಡಿಸಲಾಗಿದ್ದು ಒಂದು ಟೀ ಶರ್ಟ್ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಯಪ್ರಕಾಶ ನಗರ ರೋಟರಿ ಅಧ್ಯಕ್ಷ ವಿ.ಸಿ.ಚೆಲುವಯ್ಯ, ಸಂಸ್ಥೆ ಕಾರ್ಯದರ್ಶಿ ಅಪೂರ್ವ, ನಿಶಾಂತ್ ಹಾಗೂ ಜೆ.ಎಸ್.ಪಿಯು ಕಾಲೇಜಿನ ಪ್ರಾಧ್ಯಾಪಕ ಎನ್.ಆರ್.ಮಂಜುನಾಥ್ ಉಪಸ್ಥಿತರಿದ್ದರು.

Leave a Reply

comments

Related Articles

error: