ಮೈಸೂರು

ಪತ್ರಕರ್ತರ ಭವನದ ಸಭಾಂಗಣಕ್ಕೆ ಪತ್ರಿಕೋದ್ಯಮಿ.ದಿ.ರಾಜಶೇಖರ ಕೋಟಿ ಸಭಾಂಗಣವೆಂದು ನಾಮಕರಣ ; ಉದ್ಘಾಟನೆ ನೆರವೇರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಆ.26:- ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ  ಸಭಾಂಗಣಕ್ಕೆ  ಪತ್ರಿಕೋದ್ಯಮಿ ದಿ. ರಾಜಶೇಖರ ಕೋಟಿ ಸಭಾಂಗಣವೆಂದು ನಾಮಕರಣ ಮಾಡಲಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರು ರಾಜಶೇಖರ ಕೋಟಿ ಸಭಾಂಗಣದ ಉದ್ಘಾಟನೆಯನ್ನು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಪತ್ರಕರ್ತ ರಾಜಶೇಖರ ಕೋಟಿಯವರನ್ನು  ಸ್ಮರಿಸಿದರು. ಎಷ್ಟೇ ಸಮಸ್ಯೆಗಳಿದ್ದರೂ ಆದರ್ಶಗಳಲ್ಲಿ ರಾಜಿ ಆಗಿರಲಿಲ್ಲ. ಸ್ನೇಹಿತರಾದರೂ ಪಕ್ಷದ ಪರ, ನನ್ನ ಪರ ಬರಿ ಎಂದಿರಲಿಲ್ಲ. ಅವರು ಕೂಡ ಸಮಾಜಕ್ಕೆ ಒಳಿತಾಗುವುದನ್ನು ನಿಷ್ಠೂರವಾಗಿ ಬರೆಯುತ್ತಿದ್ದರು. ಕಟ್ಟಡ ಉದ್ಘಾಟನೆಯಾದಾಗ ಅವರು ಅಧ್ಯಕ್ಷರಾಗಿದ್ದರು. ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಈಗ ಸಭಾಂಗಣಕ್ಕೆ ನಾನು ನಾಮಕರಣ ಮಾಡುತ್ತಿದ್ದೇನೆ. ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಅದರಿಂದ ಸಮಾಜಕ್ಕೆ ಹೆಚ್ಚು ಹಾನಿಯಾಗುತ್ತದೆ. ಜನರನ್ನು ಕೆಲ ಮಾಧ್ಯಮಗಳು ಇತ್ತೀಚೆಗೆ ತಪ್ಪು ದಾರಿಗೆ ಎಳೆಯುತ್ತಿವೆ. ಅಂತಹ ಕೆಲಸವನ್ನು ಯಾರೂ ಮಾಡಬಾರದು ಎಂದರು.

ಕಾರ್ಯಕ್ರಮದಲ್ಲಿ  ಆಕಾಶವಾಣಿಯ ನಿವೃತ್ತ ಹಿರಿಯ ವಾರ್ತಾ ಉದ್ಘೋಷಕ ಎ.ಆರ್ ರಂಗರಾವ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್ ಬಾಬು ಮತ್ತಿತರರು ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: