ಪ್ರಮುಖ ಸುದ್ದಿಮೈಸೂರು

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 40 ಸಾವಿರ ಕೋಟಿ ಹಗರಣ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

ಮೈಸೂರು,ಆ,26:- ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 40 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೈಸೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಒಪ್ಪಂದ ಬದಲಾವಣೆಯಾಗಿದೆ. 526 ಕೋಟಿರೂ.ಗೆ ಇದ್ದ ಒಂದು  ವಿಮಾನದ ಬೆಲೆಗೆ 1670 ಕೋಟಿ ರೂಪಾಯಿ ನೀಡಿದ್ದಾರೆ ಎಂದರು. ರಕ್ಷಣಾ ಇಲಾಖೆಯಲ್ಲಿ ಇಂತಹ ಹಗರಣ ನಡೆದಿರಲಿಲ್ಲ. ಬಿಡಿ ಭಾಗಗಳನ್ನು ಕೊಳ್ಳಲು ಅನುಭವವೇ ಇಲ್ಲದ ಅನಿಲ್ ಅಂಬಾನಿ ಕಂಪನಿಗೆ ನೀಡಿದ್ದಾರೆ. ಮೋದಿ ಸರ್ಕಾರದ ಹಗರಣ ಜನರಿಗೆ ಗೊತ್ತಾಗಬೇಕು. ಇವರ ಯೋಗ್ಯತೆ ಜನರಿಗೆ ಹೇಳಲು ಕಾಂಗ್ರೆಸ್ ಮುಂದಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ. ಇದು ಬಿಗೆಸ್ಟ್ ಸ್ಕ್ಯಾಂ ಇನ್ ಡಿಪಾರ್ಟ್ಮೆಂಟ್ ಆಫ್ ಡಿಪೆನ್ಸ್ ಎಂದು ಕಿಡಿಕಾರಿದರಲ್ಲದೇ ಇದಕ್ಕೆ ಹೆಚ್ಚು ಪ್ರಚಾರ ನೀಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.

ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ನಾವು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇವೆ. ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಬಿಜೆಪಿಯವರು ಸಾಮಾಜಿಕ ನ್ಯಾಯಕ್ಕೆ ವಿರೋಧಿಗಳು. ಮೈಸೂರು ನಗರದಲ್ಲಿ 3 ನೇ ಸ್ಥಾನ ಬಿಜೆಪಿಗೆ ಲಭಿಸಲಿದೆ. ಮೈಸೂರಿನಲ್ಲಿ ಬಿಜೆಪಿ,ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲ್ಲ. ಮೈಸೂರು ನಗರದಲ್ಲಿ ಅಭಿವೃದ್ಧಿಯಾಗಿದ್ದರೆ ನಮ್ಮ ಅವಧಿಯಲ್ಲಿ ಮಾತ್ರ ಎಂದರು. 2532 ಕೋಟಿ ರೂಪಾಯಿ ಅನುದಾನ ನನ್ನ ಕಾಲದಲ್ಲಿ ಮೈಸೂರಿಗೆ ನೀಡಿದ್ದೇನೆ. ಬಿಜೆಪಿ ಕಾಲದಲ್ಲಿ ಮೈಸೂರಿಗೆ ಏನು ಕೊಡುಗೆ ಇಲ್ಲ. ದೇಶದಲ್ಲಿ ಮೈಸೂರು ನಗರ ನಂಬರ್ 1 ಆಗಿದ್ದು ನಮ್ಮ ಕಾಲದಲ್ಲಿ. ಮೈಸೂರು ನಗರದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿ. ಈ ಬಾರಿ ಮೈಸೂರು ಮತದಾರರು ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. 65 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆ ಕನಿಷ್ಠ 40 ಕ್ಕಿಂತ ಹೆಚ್ಚು ಸ್ಥಾನ ಪಡೆದು ಅಧಿಕಾರ ಹಿಡಿಯುತ್ತೇವೆ. ರಾಜ್ಯದ ಎಲ್ಲಾ ನಗರಪಾಲಿಕೆಗಳು, ಮುನ್ಸಿಪಾಲಿಟಿಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: